ಕೆನಡಾದ ಎಡ್ಮಂಟನ್‌ನಲ್ಲಿರುವ ತನ್ನ ಮನೆಯಲ್ಲಿ ಪಂಜಾಬ್‌ನ ಲುಧಿಯಾನ ಜಿಲ್ಲೆಯ 23 ವರ್ಷದ ಮಹಿಳೆಯೊಬ್ಬರನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ, ಆಕೆಯೊಂದಿಗೆ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದ ಭಾರತೀಯ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
Sponsoredಮೃತ ಮಹಿಳೆಯನ್ನು ದಮನ್‌ಪ್ರೀತ್ ಕೌರ್ ಎಂದು ಗುರುತಿಸಲಾಗಿದ್ದು, ಮೂಲತಃ ಸಮ್ರಾಲಾದವರಾದ ಇವರು ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು.
ಎಡ್ಮಂಟನ್ ಪೊಲೀಸ್ ಸೇವೆಯ (ಇಪಿಎಸ್) ಪ್ರಕಟಣೆಯ ಪ್ರಕಾರ, ಆಗ್ನೇಯ ಎಡ್ಮಂಟನ್‌ನ ಸಿಲ್ವರ್‌ಬೆರ್ರಿ ಪ್ರದೇಶದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ಗಾಯಗಳೊಂದಿಗೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪೊಲೀಸರು ಜುಲೈ 9 ರಂದು ಸ್ಥಳಕ್ಕೆ ಧಾವಿಸಿದ್ದರು.
ತುರ್ತು ಸೇವಾ ಸಿಬ್ಬಂದಿ ಕೌರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಜುಲೈ 12 ರಂದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬುಧವಾರ, ಜುಲೈ 22 ರಂದು 22 ವರ್ಷದ ರಿತೀಶ್ ಕುಮಾರ್ ನನ್ನು ಬಂಧಿಸಿದ್ದಾರೆ. ಕೌರ್ ಅವರ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಆಕೆಯ ಪೋಷಕರು ಸಾಲ ಮಾಡಿದ್ದರಿಂದ, ಸುಮಾರು ಐದು ವರ್ಷಗಳ ಹಿಂದೆ ಕೆನಡಾಗೆ ತೆರಳಿದ್ದರು ಎಂದು ಕುಟುಂಬದ ಸದಸ್ಯರು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ಕೌರ್ ಅವರ ಮೃತದೇಹವನ್ನು ಭಾರತಕ್ಕೆ ಮರಳಿ ತರುವ ಉದ್ದೇಶದಿಂದ ಆರಂಭಿಸಲಾದ ‘GoFundMe’ ಅಭಿಯಾನವು 18,000 ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದು, 20,000 ಡಾಲರ್‌ನ ಗುರಿಯನ್ನು ತಲುಪುವ ಹಂತದಲ್ಲಿದೆ.




