ಶನಿವಾರ, 24 ಅಕ್ಟೋಬರ್ 2026

ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ, ದೇವಿಯ ವಿಗ್ರಹದ ಜೊತೆ ಕೆರೆಗೆ ಹಾರಿದ ಮಹಿಳೆ

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್‌ ರಾವ್‌ ಮತ್ತು ಅರುಣಾ ದಂಪತಿಯ ಪುತ್ರಿ ತೇಜಸ್ವಿನಿ (25) ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ತೀವ್ರ ಒತ್ತಡದಿಂದ ಆರು ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ನಂತರ ಎರಡು ತಿಂಗಳ ಹಿಂದೆ ತಮ್ಮ ತಾಯಿ ಅರುಣಾ ಜೊತೆ ಹೈದರಾಬಾದ್‌ಗೆ ಬಂದು ಪೀರ್ಜಾದಿಗುಡದ ಶಂಕರ್‌ನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು.

ಆದರೆ ಶುಕ್ರವಾರ ಮಧ್ಯರಾತ್ರಿ 2.30 ರ ಸುಮಾರಿಗೆ ತೇಜಸ್ವಿನಿ ಎಚ್ಚರಗೊಂಡು ತನ್ನ ತಾಯಿಯ ರೂಮನ್ನು ಹೊರಗಿನಿಂದ ಲಾಕ್‌ ಮಾಡಿ ಮನೆಯಿಂದ ಹೊರಗೆ ಹೋಗಿದ್ದು, ಮನೆಯಿಂದ ಬೆತ್ತಲೆಯಾಗಿ ನಡೆದುಕೊಂಡು ಹೋಗಿ ದೇವಸ್ಥಾನದೊಳಗೆ ಹೋಗಿ ಅಲ್ಲಿದ್ದ ದೇವರ ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿ ನಗ್ನ ಸ್ಥಿತಿಯಲ್ಲಿ ದೇವಸ್ಥಾನ ಪ್ರವೇಶಿಸಿ, ದೇವಿಯ ವಿಗ್ರಹವನ್ನು ಹೊತ್ತೊಯ್ದು ಕೆರೆಗೆ ಜಿಗಿದಿದ್ದು, ತಲ್ಲಣ ಸೃಷ್ಟಿಸಿದೆ.

ಪೊಲೀಸರು ಕೆರೆಯಲ್ಲಿ ನಾಪತ್ತೆಯಾಗಿರುವ ದೇವಿಯ ವಿಗ್ರಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆಕೆ ಆಯ್ದ ಮಾರ್ಗ ಅನುಮಾನ, ನಿಗೂಢ ಪ್ರಶ್ನೆಗಳು ಎದ್ದಿರುವುದು, ಆಕೆಯ ಮಾನಸಿಕ ಸ್ಥಿತಿ ಕುರಿತು ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಆಕೆಯ ಮೃತದೇಹವನ್ನು ಹೊರತೆಗೆದರೂ, ಆಕೆ ಹಿಡಿದುಕೊಂಡಿದ್ದ ದೇವಿಯ ವಿಗ್ರಹ ಇನ್ನೂ ಪತ್ತೆಯಾಗಿಲ್ಲ.

ಪೊಲೀಸರು ತೇಜಸ್ವಿನಿಯ ತಾಯಿ ಅರುಣಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ತೇಜಸ್ವಿನಿ ಬರೆದಿರುವ ಡೆತ್‌ನೋಟ್‌ ವಶಪಡಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.