ಸೋಮವಾರ, 26 ಅಕ್ಟೋಬರ್ 2026
Trending

20 ಲಕ್ಷ ವಿಮಾ, ಅನೈತಿಕ ಸಂಬಂಧಕ್ಕಾಗಿ ಹಾಸಿಗೆಯಲ್ಲಿ ಹಾವು ಬಿಟ್ಟು ಪತಿಯನ್ನೇ ಕೊಂದ ಪತ್ನಿ

Image Credit: TOI

ಮೀರತ್‌ : ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ 20 ಲಕ್ಷ ರೂಪಾಯಿಗಳ ವಿಮಾ ಪಾವತಿ ಪಡೆಯಲು ಜೊತೆಗೆ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಲು ಅಡ್ಡಿಯಾಗಿದ್ದ ಗಂಡನನ್ನು ವಿಷಕಾರಿ ಹಾವೊಂದನ್ನು ಬಿಟ್ಟು ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

Sponsored

ಅತುಲ್‌ ಪನ್ವರ್‌ ಎನ್ನುವಾತನೇ ಪತ್ನಿಯ ಖತರ್ನಾಕ್‌ ಐಡಿಯಾದಿಂದ ಸಾವಿಗೀಡಾದವನು.

ಹಸ್ತಿನಾಪುರದಲ್ಲಿ ಕೃಷ್ಣ ಕಿಡ್ಸ್‌ ಪ್ಲೇ ಸ್ಕೂಲ್‌ ಅನ್ನು ನಡೆಸುತ್ತಿದ್ದ ದಂಪತಿ, 2019 ರಲ್ಲಿ ವಿವಾಹವಾಗಿದ್ದರು. ದಾಮಿನಿಗೆ ಶಾಲೆಯ ಬಸ್‌ ಚಾಲಕ ತುಷಾರ್‌ ಅಲಿಯಾಸ್‌ ನಿಕ್ಕಿ ಜೊತೆ ಸಂಬಂಧವಿತ್ತು. ಇವರಿಬ್ಬರು ಸೇರಿ ಅತುಲ್‌ನನ್ನು ಸಾಯಿಸುವ ಯೋಜನೆಯನ್ನು ರೂಪಿಸಿದ್ದರು. ಇದನ್ನು ಸಹಜ ಸಾವು ಮಾಡುವ ಉದ್ದೇಶದಿಂದ ಮೊದಲಿಗೆ ರಸ್ತೆ ಅಪಘಾತವನ್ನು ಸೃಷ್ಟಿಸುವ ಮೂಲಕ ಅತುಲ್‌ನ ಕೊಲ್ಲಲು ಪ್ರಯತ್ನಿಸಿದರು. ಆದರೆ ಈ ಯೋಜನೆ ವಿಫಲಗೊಂಡ ನಂತರ ಇನ್ನೊಂದು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಮಿನಿ ತನ್ನ ಗಂಡನಿಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿ, ನಂತರ ಹಾಸಿಗೆಯ ಮೇಲೆ ವಿಷಪೂರಿತ ಹಾವನ್ನು ಬಿಟ್ಟಿದ್ದಾಳೆ. ಅದು ಕಚ್ಚಿದ್ದರಿಂದ ಪತಿ ಹಾಸಿಗೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೊನೆಗೆ ಗೊಳೋ ಎಂದು ಅತ್ತು ನಾಟಕವಾಡಿದ್ದಾಳೆ ದಾಮಿನಿ. ಮೊದಲಿಗೆ ಇದು ಹಾವಿನಿಂದಲೇ ಸಾವಾಗಿತ್ತು ಎಂದು ಪರಿಗಣನೆಯಾಗಿತ್ತು. ಆದರೆ ತೀವ್ರ ತನಿಖೆಯ ನಂತರ ಖತರ್ನಾಕ್‌ ಐಡಿಯಾವನ್ನು ಹೇಳಿದ್ದಾಳೆ ಪತ್ನಿ.

ದಾಮಿನಿ ಅನೈತಿಕ ಸಂಬಂಧ ಹೊಂದಿದ್ದ ತುಷಾರ್‌ ಕೂಡಾ ವಿವಾಹಿತನಾಗಿದ್ದು, ಕೊಲೆ ಸಂಚು ಬೆಳಕಿಗೆ ಬರುವ ಮೊದಲೇ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಯೋಜಿಸುತ್ತಿದ್ದ ಎನ್ನಲಾಗಿದೆ.