ಭಾನುವಾರ, 25 ಅಕ್ಟೋಬರ್ 2026

ಪಾಯಸದಲ್ಲಿ ವಿಷ ಹಾಕಿ ಗಂಡನ ಕೊಲೆ – ಬಾತ್ರೂಂ ನೆಲದಡಿ ಶವ ಹೂತು ಸಿಮೆಂಟ್ ಪ್ಲಾಸ್ಟರ್ ಮಾಡಿದ ಹೆಂಡತಿ

ತಮ್ಮ ಪ್ರೇಯಸಿಯನ್ನು, ಮದುವೆಯಾಗುವ ಹುಡುಗನನ್ನು ಅಥವಾ ಮದುವೆಯಾಗಿರುವ ಗಂಡನನ್ನು ಅವರವರ ಸಂಗಾತಿಯರೇ ಕೊಂದು ವಿಕೃತಿ ಮೆರೆಯುತ್ತಿರುವಂತಹ ಅನೇಕ ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದೀಗ ಉತ್ತರ ಪ್ರದೇಶದಲ್ಲೊಂದು ಇಂಥದ್ದೇ ಘಟನೆ ಬೆಳಕಿಗೆ ಬಂದಿದ್ದು ಹೆಂಡತಿ ಒಬ್ಬಳು ಗಂಡನನ್ನು ಪಾಯಸದಲ್ಲಿ ವಿಷ ಹಾಕಿ ಕೊಂದು ಬಳಿಕ ಬಾತ್ರೂಮ್ ನೆಲದಲ್ಲಿ ಶವವನ್ನು ಹೂತು ಸಿಮೆಂಟ್ ಪ್ಲಾಸ್ಟರ್ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. 

Sponsored

ಈ ಭಯಾನಕ ಘಟನೆಯು ಉತ್ತರ ಪ್ರದೇಶದ (Uttarpradesh) ಆಗ್ರಾದಲ್ಲಿ ನಡೆದಿದೆ. ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದೆ. ಪೊಲೀಸರು ಬಾತ್ ರೂಂ ನೆಲವನ್ನು ಅಗೆದು ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆದಿದ್ದಾರೆ. ಕೊಲೆಗಾರ್ತಿ ಪತ್ನಿ ರೂಬಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

Marriage AdMarriage AdSponsored

ಸುರೇಂದ್ರ ಶರ್ಮ ಮತ್ತು ರೂಬಿ ಸುಮಾರು 16 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಮೇ 26 ರಂದು ಸುರೇಂದ್ರ ನಾಪತ್ತೆಯಾಗಿರುವ ಬಗ್ಗೆ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ಹೆಂಡತಿಯೇ ದೂರು ನೀಡಿದ್ದಳು. ಪೊಲೀಸರ ತನಿಖೆಯ ವೇಳೆ ಕಂಗೆಡಿಸುವ ಸತ್ಯಗಳು ಹೊರಬಂದಿವೆ.

ಕೊಲೆ ಮಾಡಿದ್ದು ಹೇಗೆ?

 ಗಂಡನನ್ನು ಕೊಲ್ಲುವ ದಿನ ಹೆಂಡತಿ ರೂಬಿ ತನ್ನಿಬ್ಬರು ಮಕ್ಕಳನ್ನು ಅಣ್ಣನ ಮನೆಗೆ ಕಳುಹಿಸಿದಳು. ಬಳಿಕ ಪಾಯಸ ಮಾಡಿ ಅದರಲ್ಲಿ ನಿದ್ದೆ ಮಾತ್ರ ಬೆರೆಸಿ ಪ್ರಜ್ಞೆ ತಪ್ಪುತಿದ್ದಂತೆ ಕತ್ತು ಹಿಸುಕಿ ಗಂಡನನ್ನು ಕೊಂದಿದ್ದಾಳೆ. ಮರುದಿನ ಬೆಳಗ್ಗೆ ಬಾತ್ ರೂಂನಲ್ಲಿ ದೊಡ್ಡ ಗುಂಡಿ ತೋಡಿ ಪತಿಯ ಶವವನ್ನು ಹೂತಿದ್ದಾಳೆ. ಯಾರಿಗೆ ಸಂಶಯ ಬಾರದಿರಲಿ ಎಂದು ಅದರ ಮೇಲೆ ಸಿಮೆಂಟ್ ಹಾಕಿ ಸೀಲ್ ಮಾಡಿದ್ದಾಳೆ.

ಕೊಂದ ನಂತರ ರೂಬಿ ಪತಿ ನಾಪತ್ತೆಯಾಗಿದ್ದಾನೆ ಎಂದು ತಾನೇ ಹುಡುಕುವಂತೆ ನಟಿಸಿದ್ದಾಳೆ. ಅಲ್ಲದೆ ಪತಿ ಇಲ್ಲದೇ ತಾನು ಅನಾಥೆಯಾದೆ ಎಂದು ಕಣ್ಣೀರು ಹಾಕುತ್ತಿದ್ದಳು.
ಬಳಿಕ ಪೊಲೀಸ್ ಠಾಣೆಗೂ ದೂರು ನೀಡಿದ್ದಾಳೆ. ಆದರೆ, ಸುರೇಂದ್ರನ ಅಣ್ಣನಿಗೆ ರೂಬಿ ನಡವಳಿಕೆ ಹಾಗೂ ಆಕೆ ನೀಡುತ್ತಿದ್ದ ಹೇಳಿಕೆಗಳ ಮೇಲೆ ಅನುಮಾನ ಬಂದು ಪೊಲೀಸರಿಗೆ ಮತ್ತೊಮ್ಮೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಪೊಲೀಸರು ರೂಬಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನೇ ಕೊಂದಿದ್ದಾಗಿ ಒಪ್ಪಿಕೊಂಡು, ಶವ ಹೂತಿಟ್ಟ ಜಾಗವನ್ನು ತೋರಿಸಿದ್ದಾಳೆ.

ಸುರೇಂದ್ರ ಶರ್ಮಾ ಅವರನ್ನು ಪತ್ನಿ ರೂಬಿ ಕೇವಲ ಒಂಟಿಯಾಗಿ ಕೊಲೆ ಮಾಡಲು ಸಾಧ್ಯವೇ ಅಥವಾ ಇನ್ಯಾರಾದರೂ ಸಹಾಯ ಮಾಡಿದ್ದಾರಾ? ಮತ್ತು ಕೊಲೆಗೆ ಅಸಲಿ ಕಾರಣವೇನು? ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.