ಭಾನುವಾರ, 25 ಅಕ್ಟೋಬರ್ 2026
Trending

ಗರ್ಭದಲ್ಲಿರುವ ಮಗುವಿನ ಡಿಎನ್‌ಎ ಪರೀಕ್ಷೆ ಮಾಡಬೇಕೆಂದ ಪತಿ, ಆತ್ಮಹತ್ಯೆಗೆ ಶರಣಾದ ಪತ್ನಿ

ಗರ್ಭದಲ್ಲಿರುವ ಮಗುವಿನ ತಂದೆ ಯಾರು ಎಂದು ಪತಿ ಪದೇ ಪದೇ ಸಂಶಯ ವ್ಯಕ್ತಪಡಿಸಿ, ಡಿಎನ್‌ಎ ಪರೀಕ್ಷೆ ನಡೆಸುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಗರ್ಭಿಣಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮೆದಕ್‌ ಜಿಲ್ಲೆಯಲ್ಲಿ ನಡೆದಿದೆ.

Sponsored

ಮೃತ ಮಹಿಳೆಯನ್ನು ಜಿ.ಸುಷ್ಮಿತಾ (23) ಎಂದು ಗುರುತಿಸಲಾಗಿದೆ.

ಗಡಿಪೆದ್ದಾಪುರ ಗ್ರಾಮದ ಜಿ ಅಭಿಲಾಶ್‌ ಅವರ ಜೊತೆ 18 ತಿಂಗಳ ಹಿಂದೆ ಸುಷ್ಮಿತಾ ಮದುವೆಯಾಗಿದ್ದರು. ಐದು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.

ಸುಶ್ಮಿತಾ ಅವರ ತಾಯಿ ನೀಡಿರುವ ದೂರಿನ ಪ್ರಕಾರ, ಆರೋಪಿ ಅಭಿಲಾಷ್‌ ತನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಲ್ಲದೆ, ನಡತೆಯ ಕುರಿತು ಸಂಶಯ ವ್ಯಕ್ತಪಡಿಸುತ್ತಿದ್ದ. ಈ ಕಿರುಕುಳಕ್ಕೆ ಆತನ ತಾಯಿ ಕೂಡಾ ಸಾಥ್‌ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಶ್ಮಿತಾ ಅವರ ಕುಟುಂಬದವರು ಜೂ.23 ರಂದು ಮಗಳ ಸೀಮಂತದ ಕುರಿತು ಚರ್ಚಿಸಲು ಅಳಿಯನ ಮನೆಗೆ ಹೋಗಿದ್ದರು. ಈ ಸಂದರ್ಭ ಅಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಲ್ಲದೆ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಅಭಿಲಾಷ್‌ ಹಠ ಹಿಡಿದಿದ್ದ ಎನ್ನಲಾಗಿದೆ. ನಂತರ ಊರಿನ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದರು.

ಈ ಘಟನೆ ನಡೆದ ಎರಡೇ ದಿನದಲ್ಲಿ ಸುಶ್ಮಿತಾ ಪತಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ಆರೋಪಿ ಅಭಿಲಾಷ್‌ ಮತ್ತು ಆತನ ತಾಯಿಯನ್ನು ಪೊಲೀಸರು ಬಂಧನ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.