ಉಡುಪಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಆರೋಪ, ದೂರು-ಪ್ರತಿದೂರು ದಾಖಲು

ಉಡುಪಿ, ಆ.09: ಜಿಲ್ಲೆಯ ಕುಂದಾಪುರದ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಯುವಕನೊಬ್ಬನನ್ನು ಮನೆಗೆ ಕರೆಸಿದ ಯುವತಿಯ ಕುಟುಂಬದವರು ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸನತ್ ಎನ್ನುವ ಯುವಕನ ಮೇಲೆ ಈ ಕೃತ್ಯ ಎಸೆಯಲಾಗಿದ್ದು, ಯುವತಿ ಮತ್ತು ಈತ ಒಂದೇ ಸಂಸ್ಥೆಯಲ್ಲಿ ಕೆಲಸಕ್ಕಿದ್ದು, ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಈ ಸಮಯದಲ್ಲಿ ಸನತ್ ನಿಂದ 50ಸಾವಿರ ಹಣವನ್ನು ಯುವತಿ ಸಾಲ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.
Sponsoredಸನತ್‌ನಿಂದ ಸಾಲ ಪಡೆದ ಬಳಿಕ ಯುವತಿ ಕೆಲಸ ತೊರೆದಿದ್ದಲ್ಲದೆ, ಈತನ ಕರೆ ಸ್ವೀಕರಿಸದೆ ಸತಾಯಿಸುತ್ತಿದ್ದಳು. ಸಾಲದ ಹಣ ವಾಪಸ್ಸು ಕೇಳಿದಾಗ ಮನೆಗೆ ಬರಲು ಯುವತಿ ಹೇಳಿದ್ದು, ಯುವತಿ ಕರೆದಳೆಂದು ಮನೆ ಬಳಿ ಹೋಗಿದ್ದ ಸನತ್ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೇ ಆತನ ಮೇಲೆಯೇ ಅಟ್ರಾಸಿಟಿ ಕಾಯ್ದೆ, ಲೈಂಗಿಕ ದೌರ್ಜನ್ಯದಡಿ ದೂರು ದಾಖಲು ಮಾಡಿರುವುದಾಗಿ ದೂರಲಾಗಿದೆ. ಈ ಕುರಿತು ಸನತ್ ಕೂಡಾ ಬೈಂದೂರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸನತ್‌ಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ರಾಮ ಕುಮಾರ್, ನಂದೀಶ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದಾರೆ.



