ಮಂಗಳವಾರ, 27 ಅಕ್ಟೋಬರ್ 2026
Trending

ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್‌ ಸಂದೇಶ್‌ ಸ್ಪಷ್ಟನೆ

ಮಂಗಳೂರು, ಮಾರ್ಚ್​​ 17: ತಮ್ಮ ವಿರುದ್ಧದ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಹಣ ಕೇಳಿದ ಆರೋಪಗಳನ್ನು ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜೆ. ಅವರು ಟಿವಿ9 ಜೊತೆ ಮಾತನಾಡಿದ್ದು, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅವರು, ಈ ಎಲ್ಲಾ ಆರೋಪಗಳು ಸುಳ್ಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಅವರ ಪತಿ ಹೇಳಿದ್ರು. ಹೀಗಾಗಿ ಆಕೆಯನ್ನು ರಕ್ಷಿಸಲು ನಾನು ಕಾಂಪೌಂಡ್ ಹಾರಿದ್ದು ನಿಜ ಎಂದಿದ್ದಾರೆ.

Sponsored

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ‌, ಈ ವಿಚಾರದ ಬಗ್ಗೆ ನಾನು ಈಗಾಗಲೇ ಕಮಿಷನರ್ ಜೊತೆ ಮಾತನಾಡಿದ್ದೇನೆ. ಸಂತ್ರಸ್ತೆಯರು ಯಾರೂ ಮುಂದೆ ಬಂದು ನಮಗೆ ದೂರು ನೀಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ದೂರು ನೀಡಿರುವ ಅಕ್ನಾಲೆಜ್ಮೆಂಟ್​​ ಇರೋದಾಗಿ ಕೆಲವರು ತಿಳಿಸಿದ್ದು, ನಾವು ನಿನ್ನೆಯೇ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಹಲವಾರು ಸಂತ್ರಸ್ತರು ಇದರಲ್ಲಿ ಇದ್ದಾರೆ. ಕೆಲ ಮಹಿಳೆಯರು ಕುಟುಂಬ ಮತ್ತು ಮಕ್ಕಳ ಕಾರಣಕ್ಕೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

Advertisement
Advertisement
Advertisement