ಭಾನುವಾರ, 25 ಅಕ್ಟೋಬರ್ 2026
Trending

ನವವಿವಾಹಿತೆಯ ನಿಗೂಢ ಸಾವು- ಬಿಗ್‌ ಟ್ವಿಸ್ಟ್‌

28 ವರ್ಷದ ಯುವತಿಯೋರ್ವಳು ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ ನಡೆದಿದೆ. ಮೃತಳನ್ನು ಆಕೃತಿ ಸುತಾರ್‌ ಎಂದು ಗುರುತಿಸಲಾಗಿದೆ.

Sponsored

ಆಕೃತಿಯ ಕುಟುಂಬದವರು ಇದು ಆತ್ಮಹತ್ಯೆಯಲ್ಲಿ ಇದೊಂದು ಕೊಲೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಆಕೃತಿ ಖಾಸಗಿ ಕಂಪನಿಯಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದು, ಎಪ್ರಿಲ್‌ 24 ರಂದು ಎಂಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅರಾಸ್ತು ಸಿಕ್ಕಾ ಎನ್ನುವಾತನನ್ನು ಮದುವೆಯಾಗಿದ್ದಳು. ನಂತರ ರಜೆಯಲ್ಲಿದ್ದ ಆಕೃತಿ ಶನಿವಾರ ಕೆಲಸಕ್ಕೆ ಹಾಜರಾಗಿದ್ದಳು.

ಶನಿವಾರ ಕಚೇರಿಗೆ ಮರಳಿದ್ದ ಆಕೃತಿ, ಅಲ್ಲಿ ತನ್ನ ಸಹೋದ್ಯೋಗಿಗಳಿಗೆ ಸಣ್ಣ ಪಾರ್ಟಿ ನೀಡಿದ್ದರು. ಖುಷಿಯಾಗಿದ್ದ ಅವಳು ಖಿನ್ನತೆಗೆ ಒಳಗಾಗಿರಲು ಸಾಧ್ಯವೇ ಇಲ್ಲ ಎಂದು ಕುಟುಂಬದವರ ವಾದ. ಸಂಜೆ 6 ಗಂಟೆ ಸುಮಾರಿಗೆ ಆಕೃತಿ ತನ್ನ ತಾಯಿ ಜೊತೆ ಮಾತನಾಡಿದ್ದಾಳೆ. ಸಹಜವಾಗಿಯೇ ಇದ್ದ ಆಕೆ ಮನೆಗೆ ಮರಳುತ್ತಿರುವುದಾಗಿ ಹೇಳಿದ್ದಳು.

ರಾತ್ರಿ 8 ಗಂಟೆ ಸುಮಾರಿಗೆ ಆಕೆಯ ಪತಿ ಅರಾಸ್ತು ಕರೆ ಮಾಡಿ, ಆಕೃತಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾನೆ. ಆದರೆ 9.30 ರ ಸುಮಾರಿಗೆ ಪೊಲೀಸರು ಕರೆ ಮಾಡಿ ಲೋಧಿ ಕಾಲೋನಿಯ ವಸತಿ ಸಂಕೀರ್ಣದ ಬಳಿ ಮಹಿಳೆಯ ಮೃತದೇಹ ಬಿದ್ದಿರುವುದಾಗಿ ಮಾಹಿತಿ ನೀಡಿದ್ದರು.

ಆಕೃತಿ ಪತಿ ಅರಾಸ್ತು ನಿರುದ್ಯೋಗಿಯಾಗಿದ್ದು, ಮದುವೆಯಾದಾಗಿನಿಂದ 20 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಆಕೃತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಪೊಲೀಸರು ವರದಕ್ಷಿಣೆ ಸಾವು, ಕೊಲೆ ಎರಡೂ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.