ಗುರುವಾರ, 29 ಅಕ್ಟೋಬರ್ 2026
Trending

ಮಂಗಳೂರು: ಮುಸ್ಲಿಂ ಧರ್ಮಗುರು ಜೊತೆ ಓಡಿ ಹೋದ ಶಿಷ್ಯೆ, ಹೆತ್ತವರ ಗೋಳಾಟ

Advertisement
Advertisement

ಮಂಗಳೂರು/ಉತ್ತರಕನ್ನಡ: 40 ವರ್ಷ ವಯಸ್ಸಿನ ವಿವಾಹಿತ ಧರ್ಮಗುರು ಒಬ್ಬ, 22 ರ ಹರೆಯ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಓಡಿ ಬಂದಿರುವ ಘಟನೆಯೊಂದು ಉತ್ತರ ಕನ್ನಡದ ಕುಮಟಾ ಮತ್ತು ಮಂಗಳೂರಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Sponsored

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವೂದ್‌ ಖಾಸಿಂ ಅವರ ಪುತ್ರಿ, ಸ್ಥಳೀಯ ಮದರಸಾಗೆ ಧರ್ಮ ಶಿಕ್ಷಣ ಕಲಿಯಲು ತೆರಳುತ್ತಿದ್ದರು. ಈ ಮದರಸದಲ್ಲಿ ಮಂಗಳೂರಿನ ಅಸೈಗೋಳಿ ನಿವಾಸಿ ವಿವಾಹಿತ ಅಶ್ರಫ್‌ ಸಅದಿ (40) ಹಲವು ವರ್ಷಗಳಿಂದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ನಿರಂತರ ಸಂಪರ್ಕವಿದ್ದು, ಪ್ರೀತಯಾಗಿ ಬೆಳೆದಿದೆ.

Advertisement
Advertisement

ಅಶ್ರಫ್‌ ಸಅದಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ತನ್ನ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಪ್ರೀತಿಯ ಬಲೆಯಲ್ಲಿ ಆಕೆಯನ್ನು ಬೀಳಿಸಿದ್ದಾನೆ ಎಂದು ಯುವತಿಯ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇವರಿಬ್ಬರು ಇತ್ತೀಚೆಗೆ ರಹಸ್ಯ ನಿಖಾ ಮಾಡಿದ್ದು, ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಶ್ರಫ್‌ ಯುವತಿಯನ್ನು ಮಂಗಳೂರಿನ ಅಸೈಗೋಳಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

Advertisement

ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಪೋಷಕರು, ಕೊಣಾಜೆ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದು, ನಂತರ ಪೊಲೀಸರು ಅಶ್ರಫ್‌ ಸಅದಿ ಹಾಗೂ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದರು.

ಪೋಷಕರು, ಸಹೋದರ ಸಂಬಂಧಿಕರು ಕಣ್ಣೀರಿಡುತ್ತಾ ಯುವತಿಗೆ ಬುದ್ಧಿ ಹೇಳಿ ಮನೆಗೆ ಬಾ ಎಂದರೂ ಯುವತಿ ಮಣಿಯಲಿಲ್ಲ. ಆಕೆ ಕ್ಯಾರೇ ಎನ್ನದೆ ವಾಪಸ್‌ ಮನೆಗೆ ಹೋಗಲು ನಿರಾಕರಣೆ ಮಾಡಿದ್ದಾಳೆ.

ತಾನು ಸಪ್ತಪದಿ ತುಳಿದಿರುವ ಧರ್ಮಗುರು ಅಶ್ರಫ್‌ ಜೊತೆಯೇ ಬಾಳುವುದಾಗಿ ಪಟ್ಟು ಹಿಡಿದ ಯುವತಿ, ತಾನು ಸ್ವ ಇಚ್ಛೆಯಿಂದ ಬಂದಿರುವುದಾಗಿ ಅಧಿಕೃತ ಹೇಳಿಕೆ ದಾಖಲು ಮಾಡಿ ಹೆತ್ತವರನ್ನು ಧಿಕ್ಕರಿಸಿ, ಧರ್ಮಗುರುವಿನ ಜೊತೆಯೇ ಹೋಗಿದ್ದಾಳೆ.

Advertisement
Advertisement