ಬೆಂಗಳೂರು,ಜುಲೈ 19: ಅಣ್ಣ ಧನುಷ್ ಜೊತೆ ಮದುವೆ ನಿರಾಕರಿಸಿದ ಕಾರಣಕ್ಕೆ ತಮ್ಮ ಸೂರ್ಯನಿಂದ ಚಾಕು ಇರಿತಕ್ಕೆ ಒಳಗಾಗಿ ಬೆಂಗಳೂರಿನ ಯುವತಿ ಅಮೃತಾ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಮದುವೆ ಮಾತ್ರವಲ್ಲದೆ ಹಣಕಾಸಿನ ವಿಚಾರ ಕೂಡಾ ಕೊಲೆಗೆ ಪ್ರಮುಖ ಕಾರಣ ಎನ್ನುವುದು ತನಿಖೆ ವೇಳೆ ಬಯಲಾಗಿದೆ.
Sponsoredಮೃತ ಯುವತಿಯ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಈ ಕುರಿತು ಅಮೃತಾ ಹೇಳಿದ್ದಕ್ಕೆ ಧನುಷ್ ಸಹೋದರರು ತಾಯಿಯ ಬಳಿ ಚೀಟಿ ಹಾಕಿದ್ದರು. ಅದರಲ್ಲಿ ಸಹೋದರ ಸೂರ್ಯನೇ ಹೆಚ್ಚಿನ ಕಂತನ್ನು ಕಟ್ಟಿದ್ದ. ಚೀಟಿ ಮುಗಿದಿದ್ದರೂ ಅಮೃತಾ ತಾಯಿ ಹಣ ಹಿಂದಿರುಗಿಸಿರಲಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಚೀಟಿ ಅವಧಿ ಮುಗಿದರೂ ತಮ್ಮ 5 ಲಕ್ಷ ರೂಪಾಯಿ ಹಣವನ್ನು ಅಮೃತಾ ಮತ್ತು ಆಕೆಯ ತಾಯಿ ನೀಡದಿರುವ ಕುರಿತು ಆರೋಪಿ ಸೂರ್ಯನಿಗೆ ಸಿಟ್ಟಿತ್ತು. ಹಣ ಕೊಡಲು ಪದೇ ಪದೇ ಕೇಳಿದರೂ ಜೊತೆಗೆ ಮದುವೆ ಆಗಲ್ಲ ಅಣ್ಣನನ್ನು ಎನ್ನುವ ನಿರಾಕರಣೆ ಇನ್ನಷ್ಟು ಕೋಪ ಏರಿಸಿತ್ತು. ಈ ಕಾರಣದಿಂದ ಕೊಲೆಗೆ ಸೂರ್ಯ ನಿರ್ಧಾರ ಮಾಡಿದ್ದ.
ಯುವತಿಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೂಡಾ ಹಣ ಹಿಂದಿರುಗಿಸುವಂತೆ ಕೇಳಿದ್ದ. ಆದರೆ ದುಡ್ಡು ನೀಡಲ್ಲ ಎಂದು ಅಮೃತಾ ಹೇಳಿದ್ದೇ ಆಕೆಯ ಪ್ರಾಣಕ್ಕೆ ಸಂಚಾಕಾರವಾಯಿತು ಎನ್ನಲಾಗಿದೆ.





