ಶುಕ್ರವಾರ, 6 ನವೆಂಬರ್ 2026

ಬೆಂಗಳೂರಿನಲ್ಲಿ ಭೀಕರ ಕೃತ್ಯ: ಪತ್ನಿ ಮೇಲಿನ ಸಿಟ್ಟು, ಒಂದೇ ಕುಟುಂಬದ 7 ಮಂದಿಯ ಬರ್ಬರ ಹತ್ಯೆ

Advertisement
Advertisement

ಬೆಂಗಳೂರು: ರಾಜ್ಯ ರಾಜಧಾನಿಯ ಶ್ರೀರಾಮ್‌ ಪುರದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲಿನ ಸಿಟ್ಟಿನಲ್ಲಿ ಆಕೆಯನ್ನು ಸೇರಿ ಆಕೆಯ ಕುಟುಂಬದ 7 ಮಂದಿಯನ್ನು ನಿರ್ದಯವಾಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

Sponsored

ಆರೋಪಿ ಶೇಖರ್‌ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಪತ್ನಿ ಸುನೀತಾಳನ್ನು ರುಬ್ಬುವ ಗುಂಡಿನಿಂದ ತಲೆಗೆ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿ ಶವವನ್ನು ತನ್ನ ಕ್ಯಾಬ್‌ನಲ್ಲಿ ತುಂಬಿಸಿ ನಂದಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದ. ಬುಧವಾರ ಈ ಕೃತ್ಯ ಮಾಡಿದ್ದಾನೆ. ನಂತರ ಬಾಮೈದರಾದ ಶಿವಕುಮಾರ್‌, ಶಂಕರ್‌ ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ, ನಂತರ ಮನೆಗೆ ಬಂದ ಅತ್ತೆ ರೂಪವತಿ, ಕೊನೆಯದಾಗಿ ಶಂಕರ್‌ ಅವರ ಪುತ್ರ 7 ವರ್ಷದ ಪುನೀತ್‌ ಎಂಬ ಬಾಲಕನನ್ನು ಹತ್ಯೆ ಮಾಡಿದ್ದಾನೆ.

Advertisement
Advertisement

ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ ಉನ್ನತ ಪೊಲೀಸ್‌ ಅಧಿಕಾರಿಗಳು ಆರೋಪಿ ಶೇಖರ್‌ನನ್ನು ಬಂಧನ ಮಾಡಿದ್ದಾರೆ. ಎರಡೇ ದಿನದಲ್ಲಿ ಈತ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Advertisement

ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದುವರೆಗೆ ಒಂದು ಶವ ಮಾತ್ರ ಪತ್ತೆಯಾಗಿದ್ದು, ಉಳಿದ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement