ವಿಟ್ಲ: ಟ್ರ್ಯಾಕ್ಟರ್‌ನಲ್ಲಿ ಪ್ರಯಾಣ ಮಾಡುವಾಗಲೇ ಚಾಲುಗೊಂಡ ಮರದ ಸಿಪ್ಪೆ ತೆಗೆಯುವ ಯಂತ್ರ, ನಾಲ್ವರಿಗೆ ಗಂಭೀರ ಗಾಯ
ವಿಟ್ಲ: ಟ್ರ್ಯಾಕ್ಟರ್‌ಗೆ ಜೋಡಿಸಲಾಗಿದ್ದ ಮರದ ಸಿಪ್ಪೆ ತೆಗೆಯುವ ಯಂತ್ರವೊಂದು ಪ್ರಯಾಣದ ವೇಳೆ ಏಕಾಏಕಿ ಚಾಲುಗೊಂಡ ಪರಿಣಾ, ಟ್ರ್ಯಾಕ್ಟರ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಅಡ್ಯನಡ್ಕ ಸಮೀಪ ನಡೆದಿದೆ.
Sponsoredಟ್ರ್ಯಾಕ್ಟರ್‌ಗೆ ಮರದ ಸಿಪ್ಪೆ ತೆಗೆಯುವ ಯಂತ್ರವನ್ನು ಜೋಡಿಸಲಾಗಿತ್ತು. ಆ ಟ್ರ್ಯಾಕ್ಟರ್‌ನಲ್ಲಿ ನಾಲ್ವರು ಕಾರ್ಮಿಕರು ಪ್ರಯಾಣ ಮಾಡುತ್ತಿದ್ದು, ಟ್ರ್ಯಾಕ್ಟರ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಅದರ ಜೊತೆ ಜೋಡಿಸಲಾಗಿದ್ದ ಯಂತ್ರವು ಏಕಾಏಕಿ ಚಾಲನೆಗೊಂಡಿದೆ. ಈ ವೇಳೆ ಕಾರ್ಮಿಕರು ಯಂತ್ರದತ್ತ ತಳ್ಳಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಂಭೀರವಾಗಿ ಗಾಯಗೊಂಡವರು ಉತ್ತರ ಭಾರತದ ಮೂಲದ ಕಾರ್ಮಿಕರು. ಘಟನೆ ನಡೆದ ಕೂಡಲೇ ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಅಡ್ಯನಡ್ಕ ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮರೆದಿದ್ದಾರೆ.
ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.




