ಖಾಸಗಿ ಬಸ್ ಕಂಡಕ್ಟರ್ ವಿದ್ಯಾರ್ಥಿನಿಗೆ ಗುಪ್ತಾಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂದಿಸಿದ್ದಾರೆ
Sponsoredಇರ್ಫಾನ್ (32ವ) ಬಂಧಿತ ಆರೋಪಿ. ಖಾಸಗಿ ಸೆಲೆನಾ ಬಸ್ ನ ಕಂಡಕ್ಟರ್ ಕಲ್ಲೇರಿಯ ಅಬುಸಾಲಿಯವರ ಮಗ ಪ್ರಸ್ತುತ ಉಪ್ಪಿನಂಗಡಿ ಕರ್ವೆಲು ಅಬುಬಕ್ಕರ್ ರವರ ಮನೆಯಲ್ಲಿ ಬಾಡಿಗೆಯಲ್ಲಿ ಈತ ವಾಸವಾಗಿದ್ದ. ಇದೀಗ ಮಂಗಳೂರು ದಕ್ಷಿಣ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
Marriage AdSponsoredಪೊಲೀಸ್ ಪ್ರಕಟನೆ:
ಇರ್ಫಾನ್ ಸೆಲೇನ ಮಂಗಳೂರು ವಿಟ್ಲ ಬಸ್ ಕಂಡಕ್ಟರ್ ಆಗಿದ್ದು, ದಿನಾಂಕ 9/7/2026 ರಂದು ಸಂಜೆ ಸುಮಾರು 5:00 ಗಂಟೆಗೆ ಕಾಲೇಜು ವಿದ್ಯಾರ್ಥಿನಿಯ ರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯವಾದ ಸನ್ನೆಯನ್ನು ಮಾಡಿ ಹಿಂದಿನ ಸೀಟಿಗೆ ಬಾ ಎಂದು ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ಆರೋಪಿತನ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಈ ದಿನ ದಿನಾಂಕ 10.07.2026 ರಂದು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.




