ಸೋಮವಾರ, 26 ಅಕ್ಟೋಬರ್ 2026
Trending

15 ವರ್ಷದ ಬಾಲಕನಿಗೆ ಮದ್ಯ ಕುಡಿಸಿದ ಕಂಪನಿ, ಅಪ್ರಾಪ್ತ ಮಹಡಿಯಿಂದ ಬಿದ್ದು ಸಾವು!

Ban on sale of liquor
Image Source: Zoom tv

ಬೆಂಗಳೂರು ಫ್ರೆಬವರಿ 03: ಅಪ್ರಾಪ್ತ ಬಾಲಕರಿಗೆ ಮದ್ಯ ಕುಡಿಸಿದ ನಗರದ ಸಂಸ್ಥೆಯೊಂದು, ನಂತರ ಅಪ್ರಾಪ್ತನೊಬ್ಬ ತನ್ನ ಅಪಾರ್ಟ್‌ಮೆಂಟ್‌ನ 7 ನೇ ಮಹಡಿಯಿಂದ ಉರುಳಿ ಬಿದ್ದು ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಮೃತ ಬಾಲಕನ ಪೋಷಕರು ರಾಜರಾಜೇಶ್ವರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

Sponsored

ಈ ಘಟನೆ ಜ.31 ರ ರಾತ್ರಿ ಸುಮಾರು 9 ಗಂಟೆ 40 ನಿಮಿಷಕ್ಕೆ ನಡೆದಿದೆ. ಡಾ.ವಿಷ್ಣುವರ್ಧನ್‌ ರಸ್ತೆಯ ಅಪಾರ್ಟ್‌ಮೆಂಟ್‌ನ ನಿವಾಸಿಯಾಗಿರುವ ಮೃತನ ಪಾಲಕರು ಅದೇ ದಿನ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ತನಿಖೆ ಸಮಯದಲ್ಲಿ ಕೆಲವೊಂದು ಸತ್ಯಾಂಶ ಹೊರಗೆ ಬಂದಿದೆ. 15 ವರ್ಷದ ಬಾಲಕನಿಗೆ ಸಂಸ್ಥೆಯೊಂದು ಸಿಗರೇಟ್‌ ಮತ್ತು ಮದ್ಯಪಾನ ಮಾಡಿಸಿದೆ ಎಂದು ವರದಿಯಾಗಿದೆ.

Advertisement

ಮೃತ ಬಾಲಕ ಮತ್ತು ಸ್ನೇಹಿತರು ಸ್ಥಳೀಯ ಕಂಪನಿಯಲ್ಲಿದ್ದಾಗ ಈ ಕೃತ್ಯ ನಡೆದಿದ್ದು, ಸಂಸ್ಥೆಯು ಅಪ್ರಾಪ್ತರಿಗೆ ಮದ್ಯ ಕುಡಿಸಿರುವ ಆರೋಪದ ಮೇಲೆ, ಕಂಪನಿಯ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ (JJ Act) ಮತ್ತು ಕರ್ನಾಟಕ ಮದ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ANI ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ಇಲ್ಲಿದೆ.

ಪೊಲೀಸರು ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದು, ಸಂಸ್ಥೆಯ ಮೇಲಿನ ಕ್ರಮ ಕೈಗೊಳ್ಳುವುದರ ಜೊತೆಗೆ ಕೃತ್ಯವೆಸಗಿದವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಸಿದ್ದಾರೆ.