Home » ಹನೂರು ಎನ್‌ಕೌಂಟರ್‌ ತನಿಖೆಗೆ ಸಿಐಡಿ ಎಂಟ್ರಿ

ಹನೂರು ಎನ್‌ಕೌಂಟರ್‌ ತನಿಖೆಗೆ ಸಿಐಡಿ ಎಂಟ್ರಿ

0 comments

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣಕ್ಕೆ ಕುರಿತಂತೆ ಮ್ಯಾಜಿಸ್ಟ್ರೇಟ್‌ ತನಿಖಾ ವರದಿ ಸಲ್ಲಿಕೆಯಾದ ನಂತರ ಇದೀಗ ಸಿಐಡಿ ತಂಡ ಎಂಟ್ರಿ ನೀಡಿದೆ.

ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸರಕಾರವು ಸಿಐಡಿಗೆ ವಹಿಸಿದ್ದು, ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಇಬ್ಬರು ಡಿವೈಎಸ್ಪಿಗಳು ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಈ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.

ಎನ್‌ಕೌಂಟರ್‌ ಹಾಗೂ ಹನೂರು, ರಾಮಾಪುರ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಐಡಿ ಮಾಡಲಾಗಿದೆ.

You may also like