ಸೋಮವಾರ, 26 ಅಕ್ಟೋಬರ್ 2026
Trending

ಬೆಳ್ತಂಗಡಿ: ಕಾಲೇಜ್‌ ವಿದ್ಯಾರ್ಥಿನಿಯ ಕಿಡ್ನಾಪ್‌ಗೆ ಅಪರಿಚಿತರ ಯತ್ನ, ಹಲ್ಲೆಗೊಳಗಾದ ವಿದ್ಯಾರ್ಥಿನಿ

Crime
Advertisement

ಬೆಳ್ತಂಗಡಿ: ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಿಡ್ನಾಪ್‌ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಜೂನಿಯರ್‌ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಈ ಘಟನೆ ನಡೆದಿದೆ.

Sponsored

ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫೆ.9 ರಂದು ಬೆಳಗ್ಗೆ ಸುಮಾರು 8.30 ಕ್ಕೆ ಸಂತೆಕಟ್ಟೆ ಬಸ್‌ ಹತ್ತಲು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ ವಿದ್ಯಾರ್ಥಿನಿಯನ್ನು ಕಾರಿನೊಳಗೆ ಕರೆದೊಯ್ಯಲು ಪ್ರಯತ್ನ ಪಟ್ಟಾಗ ಆಕೆ ಬೊಬ್ಬೆ ಹೊಡೆದು ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದು, ಆಗ ಹಿಂಭಾಗದಿಂದ ಸ್ಕೂಟರ್‌ ಬರುವುದನ್ನು ನೋಡಿ ವಿದ್ಯಾರ್ಥಿನಿಗೆ ಅಪರಿಚಿತರು ಚೂರಿಯಿಂದ ಕೈಗೆ, ಬೆರಳಿಗೆ ಚುಚ್ಚಿದ್ದು, ಆಕೆಯ ಕಾಲೇಜು ಬ್ಯಾಗ್‌ ಹಿಡಿದುಕೊಂಡು ವಾಪಸ್‌ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಕಾರಿನ ನಂಬರ್‌ ಪ್ಲೇಟ್‌ಗೆ ಬಟ್ಟೆ ಕಟ್ಟಲಾಗಿತ್ತು ಎಂದು ವರದಿಯಾಗಿದೆ.

Advertisement
Advertisement

ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿನಿ ಬಳಿಯಿಂದ ಮಾಹಿತಿ ಪಡೆದಿದ್ದು, ತನಿಖೆ ಪ್ರಾರಂಭ ಮಾಡಿದ್ದಾರೆ.

Advertisement
div class="ere-sticky">