ಭಾನುವಾರ, 25 ಅಕ್ಟೋಬರ್ 2026

ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಆರೋಪಿ ಚೇತನ್‌ಗೆ ಜಾಮೀನು ಮಂಜೂರು!

ಪುತ್ತೂರು: ಕಲ್ಲೇಗ ಟೈಗರ್ಸ್‌ ತಂಡದ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣದ ಮೊದಲ ಆರೋಪಿ ಕೃಷ್ಣನಗರದ ಚೇತನ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

Sponsored

2023 ರ ನವೆಂಬರ್‌ 6 ರಂದು ನೆಹರುನಗರದಲ್ಲಿ ರಾತ್ರಿ ವೇಳೆ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಕುರಿತಂತೆ ಕೃಷ್ಣನಗರದ ಚೇತನ್‌, ಪಡೀಲು ನಿವಾಸಿ ಮನೀಷ್‌, ಬನ್ನೂರಿನ ಮಂಜುನಾಥ್‌ ಯಾನೆ ಹರಿ ಹಾಗೂ ಕೇಶವ ಪಡೀಲ್‌ ಅವರನ್ನು ಪೊಲೀಸರು ಬಂಧನ ಮಾಡಿದ್ದರು.

Marriage AdMarriage AdSponsored

ಕೃತ್ಯ ನಡೆದು ಸರಿ ಸುಮಾರು 3 ವರ್ಷಗಳ ಬಳಿಕ ಪ್ರಮುಖ ಇಬ್ಬರು ಆರೋಪಿಗಳಾದ ಚೇತನ್‌ ಹಾಗೂ ಮನೀಷ್‌ಗೆ ಜಾಮೀನು ದೊರಕಿದೆ. ಈ ಪ್ರಕರಣದ ಎರಡನೇ ಆರೋಪಿ ಮನೀಷ್‌ಗೂ ಕೆಲ ದಿನಗಳ ಹಿಂದಷ್ಟೇ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಮೂರನೇ ಆರೋಪಿ ಮಂಜುನಾಥ್‌ ಶೆಣೈ, ನಾಲ್ಕನೇ ಆರೋಪಿ ಕೇಶವ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೆಲ ಸಮಯದ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು.