ಭಾನುವಾರ, 25 ಅಕ್ಟೋಬರ್ 2026

ನಟಿ ರುಕ್ಮಿಣಿ ವಸಂತ್‌ ಡೀಪ್‌ಫೇಕ್‌ ಪ್ರಕರಣ: ಹೈಟೆಕ್‌ ಕಿಲಾಡಿಗಳ ಬಂಧನ

Image Credit: Tv9 Kannada

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ ಅವರ ಡೀಪ್‌ಫೇಕ್‌ ಫೊಟೋ ಹಾಗೂ ವಿಡಿಯೋ ಸೃಷ್ಟಿ ಮಾಡಿದ್ದ ಸೈಬರ್‌ ಅಪರಾಧಿಗಳನ್ನು ಬೆಂಗಳೂರಿನ ಸೈಬರ್‌ ಕಮಾಂಡ್‌ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರು ಸುಶಿಕ್ಷಿತರು ಮತ್ತು ಸಮಾಜದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ.

Sponsored

ರವಿಕುಮಾರ್‌ (24), ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ರಂಜಿತ್‌ ಕುಮಾರ್‌ (25), ಚಂದ್ರಕಾಂತ್‌ (33) ಬಂಧಿತ ಆರೋಪಿಗಳು.

Marriage AdMarriage AdSponsored

ಪ್ರಕರಣದ ಮೊದಲ ಆರೋಪಿ ರವಿ ಕುಮಾರ್‌ ಬಿಎಸ್ಸಿ ನರ್ಸಿಂಗ್‌ ಮುಗಿಸಿ ತನ್ನದೇ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದನು. ಇನ್ನು ಎರಡನೇ ಆರೋಪಿ ರಂಜಿತ್‌ ಕುಮಾರ್‌, ವಾರ್ಷಿಕ 20 ಲಕ್ಷ ರೂಪಾಯಿ ಭಾರೀ ಸಂಬಳದ ಪ್ಯಾಕೇಜ್‌ ಹೊಂದಿದ್ದ ಈ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ಇನ್ನೋರ್ವ ಆರೋಪಿ ಚಂದ್ರಕಾಂತ್‌ ಈತ ಬೆಂಗಳೂರಿನ ಪ್ರತಿಷ್ಠಿತ ಚಾರ್ಟೆಡ್‌ ಅಕೌಂಟೆಂಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಒಳ್ಳೆಯ ಸಂಬಳ ಪಡೆಯುತ್ತಿದ್ದನು.

ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಹೈ ಎಂಡ್‌ ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸೈಬರ್‌ ಕಮಾಂಡ್‌ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ.