ಸೋಮವಾರ, 26 ಅಕ್ಟೋಬರ್ 2026
Trending

ಸೀರೆ ಧರಿಸಿ ತೃತೀಯಲಿಂಗಿಯಂತೆ ನಟಿಸಿ ಮನೆಗೆ ಬಂದ ವ್ಯಕ್ತಿ!

Crime

ಮುಂಬೈ, ಆ.21: ಮುಂಬೈನ ಪೊವೈ ಪ್ರದೇಶದಲ್ಲಿ ತೃತೀಯಲಿಂಗೆ ರೀತಿ ನಟಿಸಿ ಸೀರೆ ಧರಿಸಿ ಮನೆಗೆ ನುಗ್ಗಿದ ವ್ಯಕ್ತಿಯೋರ್ವ, ಮಹಿಳೆಗೆ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲುಗೊಂಡ ಕೆಲವೇ ಗಂಟೆಯಲ್ಲಿ ಆರೋಪಿಯ ಬಂಧನ ಮಾಡಿದ್ದಾರೆ.

Sponsored

ಬಂಧಿತ ಆರೋಪಿಯನ್ನು ಅನಿಲ್‌ ಶೇಷರಾವ್‌ ಶಿಂಧೆ (28) ಎಂದು ಗುರುತಿಸಲಾಗಿದೆ.

ಸಂತ್ರಸ್ತ ಮಹಿಳೆಗೆ ಮದುವೆಯಾಗಿ ನಾಲ್ಕೈದು ವರ್ಷವಾದರೂ ಮಕ್ಕಳಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ದೃಷ್ಟಿ ತೆಗೆದು ಮಗುವಿನ ಭಾಗ್ಯಕ್ಕೆಂದು ವಿಶೇಷ ಆಶೀರ್ವಾದ ಮಾಡುವುದಾಗಿ ನಂಬಿಸಿ ಫ್ಲಾಟ್‌ಗೆ ಪ್ರವೇಶ ಮಾಡಿದ್ದ. ಒಳಗೆ ಹೊಕ್ಕ ಕೂಡಲೇ ಬೆಡ್‌ರೂಂ ಗೆ ನುಗ್ಗಿದ ಆತ ಜೀವ ಬೆದರಿಕೆ ಹಾಕಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಮನೆಯಲ್ಲಿದ್ದ ಎರಡು ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾನೆ.

ಪೊವೈ ಪೊಲೀಸರು ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಆರೋಪಿ ಸೀರೆ ಧರಿಸಿ ಆಟೋರಿಕ್ಷಾ ಮೂಲಕ ಥಾಣೆಯತ್ತ ತೆರಳಿರುವುದು ಕಂಡು ಬಂದಿದೆ. ಅದೇ ರಾತ್ರಿ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.