ಸೋಮವಾರ, 26 ಅಕ್ಟೋಬರ್ 2026
Trending

ಕಾರಲ್ಲಿ ಮಹಿಳೆಯರ ಖಾಸಗಿ ಅಂಗದೊಳಗೆ ಡ್ರಗ್ಸ್ ಇಟ್ಟು ಸಾಗಣೆ- ಯುವತಿಯರು ಸೇರಿ 7 ಜನ ಬಂಧನ

ಮಹಿಳೆಯರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಾ  ತಮ್ಮ ಖಾಸಗಿ ಅಂಗದಲ್ಲಿ ನಿಷೇಧಿತ ಎಂಡಿಎಂಎ (MDMA) ಡ್ರಗ್ಸ್‌ ಸಾಗಿಸುತ್ತಿದ್ದ ವೇಳೆ ಕೇರಳಂ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಕೇರಳದ ತ್ರಿಶ್ಯೂರ್ ನಲ್ಲಿ ನಡೆದಿದೆ. ಪ್ರಕಾರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಏಳು ಮಂದಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

Sponsored

ಕಾರಿನಲ್ಲಿದ್ದ ಶಿಫಾಸ್ (26), ವಿದ್ಯಾ (28), ಜಿಷ್ಣು (27) ಮತ್ತು ಶ್ರೀಲಕ್ಷ್ಮಿ (20) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತದನಂತರ ಶಬೀರ್ (34), ಅನ್ಶಾದ್ (31) ಮತ್ತು ಟಿ.ಟಿ. ಸುಮೇಶ್ (25) ಎಂಬುವವರು ಬಂದಿತರು.

ಪಾಲಕ್ಕಾಡ್‌ ರೆಸಾರ್ಟ್‌ ಒಂದರಿಂದ ತ್ರಿಶ್ಯೂರ್ ಕಡೆಗೆ ಬರುತ್ತಿದ್ದ ಕಾರನ್ನು ವಾಣಿಯಂಪಾರ ಎಂಬಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಈ ಜಾಲ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಒಟ್ಟು 308 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಕೇರಳಂನಲ್ಲಿ ನಡೆದ ಅತಿ ದೊಡ್ಡ ಡ್ರಗ್ಸ್ ಜಪ್ತಿಯಾಗಿದೆ.