ಶನಿವಾರ, 24 ಅಕ್ಟೋಬರ್ 2026

Actress Sadha: ಆ ನಟ ಅಸಹ್ಯವಾಗಿ ನಾಲಗೆಯಿಂದ ನನ್ನನ್ನು ನೆಕ್ಕುತ್ತಾ, ಬೇಡ ಬೇಡ ಅಂದ್ರೂ ಯಪ್ಪಾ… !! ಆತ ಮಾಡಿದ್ದೇನು, ನಟಿ ಹೇಳಿದ್ದೇನು ಗೊತ್ತಾ?

ಬಹುಭಾಷಾ ನಟಿ ಸದಾ(Actress Sadha)ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Actress Sadha
Image source Credit: dailythanti.com

Actress Sadha: ಸಿನಿಮಾ ಎಂಬ ಬಣ್ಣದ ಲೋಕದ ಒಳಗೆ ಹೊರ ಹೊಕ್ಕ ಬಳಿಕ ವಾಸ್ತವ ಸತ್ಯದ ಅನಾವರಣವಾಗುತ್ತ ಕಿದೆ. ಸಿನಿಮಾರಂಗವನ್ನು ವೃತ್ತಿ ಜೀವನವಾಗಿ ಆಯ್ದುಕೊಂಡಾಗ ಸಾಕಷ್ಟು ಅಡೆತಡೆಗಳನ್ನು ದಾಟಿ ಮುಂದೆ ಸಾಗಬೇಕಾಗುತ್ತದೆ. ಅದರಲ್ಲಿಯೂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುವ ಸವಾಲು ಅಷ್ಟಿಷ್ಟಲ್ಲ. ಸದ್ಯ, ಬಹುಭಾಷಾ ನಟಿ ಸದಾ(Actress Sadha)ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರರಂಗದಲ್ಲಿ ಭದ್ರವಾದ ಅಡಿಪಾಯ ಹಾಕಿ ನೆಲೆಯೂರಲು ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಈಗಾಗಲೇ ಹಲವಾರು ನಟಿಯರು ಬಹಿರಂಗವಾಗಿ ಮಾತನಾಡಿದ್ದು ಕೂಡ ಇದೆ. ಕಾಸ್ಟ್ ಕೌಚಿಂಗ್ ಎಂಬ ಭಯಾನಕ ಸತ್ಯವನ್ನು ನಟಿಯರು ಮಾತ್ರವಲ್ಲದೇ ನಟರೂ ಕೂಡ ಸಮಾಜದ ಮುಂದೆ ಬಾಯ್ಬಿಟ್ಟಿದ್ದಾರೆ. ಬಹುಭಾಷಾ ನಟಿ ಸದಾ ಅವರು ಚಿತ್ರರಂಗದಲ್ಲಿ ತಾವು ಎದುರಿಸಿದ ನೋವನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾ ಅವಕಾಶ ಸಿಗುವುದಂತು ಭಾರೀ ಕಷ್ಟ!! ಅದರಲ್ಲಿಯೂ ಒಂದು ಸಾರಿ ನಟಿ ನಟಿಸಲು ಒಪ್ಪಿಗೆ ನೀಡಿ ಸಹಿ ಹಾಕಿದರೆ ಮುಗಿಯಿತು. ನಟಿಯರು(Actress)ನಿರ್ದೇಶಕರು ಹೇಳಿದಂತೆ ನಟಿಸಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಒಲ್ಲದ ಮನಸ್ಸಿನಿಂದ ಅನೇಕ ಸನ್ನಿವೇಶಗಳಲ್ಲಿ ಬಣ್ಣ ಹಚ್ಚಬೇಕಾಗುತ್ತದೆ. ಅದರಲ್ಲಿಯೂ ರೊಮ್ಯಾಂಟಿಕ್‌(Romantic)ಅಥವಾ ಅಸಭ್ಯಕರ ಸನ್ನಿವೇಶಗಳಲ್ಲಿ ಒತ್ತಾಯ ಪೂರ್ವಕವಾಗಿ ನಟಿಸುವಂತೆ ಮಾಡಲಾಗುತ್ತದೆ ಎಂಬ ಆರೋಪ ಆಗಾಗ ಕೇಳಿ ಬರುತ್ತದೆ.

ಬಹುಭಾಷಾ ನಟಿ ಸದಾ (Actress Sadha), ” ನನಗೆ ಈಗಲೂ ಆ ಸನ್ನಿವೇಶವನ್ನು ನೆನೆಸಿಕೊಂಡರೆ ಇರಿಸುಮುರಿಸು ಎನಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ. ಸದಾ ನಟಿಸಿದ ಮೊದಲ ಸಿನಿಮಾ. ‘ಜಯಂ’ ಸಿನಿಮಾ 20 ವರ್ಷದ ಹಿಂದೆ ದೊಡ್ಡ ಯಶಸ್ಸು ಕಂಡಿತ್ತು. ಎಷ್ಟರಮಟ್ಟಿಗೆ ಈ ಸಿನಿಮಾ ಹಿಟ್ ಆಗಿತ್ತು ಎಂದರೆ, ರಾತ್ರೋ ರಾತ್ರಿ ಸದಾ ಅವರಿಗೆ ಸ್ಟಾರ್ ನಟಿ ಎಂಬ ಬಿರುದು ತಂದುಕೊಟ್ಟಿತ್ತು. ತಮಿಳು, ತೆಲುಗಿನ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡ ನಟಿ ಸದಾ ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ(YouTube Channel)ತಮ್ಮ ಜೀವನದ ಬಗ್ಗೆ ತಾವು ನಟಿಸಿದ ಸಿನಿಮಾಗಳ ಕುರಿತು ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ.

‘ಜಯಂ’ ಚಿತ್ರದ ಒಂದು ಸನ್ನಿವೇಶದ ಬಗ್ಗೆ ಇವತ್ತಿಗೂ ನಟಿಗೆ ಇಂದಿಗೂ ಬೇಸರವಿದೆಯಂತೆ. ಯಾರಿಗೂ ಗೊತ್ತಾಗದ ಹಾಗೆ ನಾಯಕ ನಿತಿನ್‌ನನ್ನು ಭೇಟಿಯಾಗಲು ನಟಿ ದೇವಸ್ಥಾನಕ್ಕೆ ಬರುವ ಸನ್ನಿವೇಶದಲ್ಲಿ ಜೋಡಿಗಳಿಬ್ಬರು ಇಬ್ಬರು ವಿಲನ್ ಗೋಪಿಚಂದ್ ಎದುರು ಸಿಕ್ಕಿ ಬೀಳುತ್ತಾರೆ. ಆ ಸನ್ನಿವೇಶದಲ್ಲಿ ಗೋಪಿಚಂದ್ ನಾಯಕಿಯ ಕೆನ್ನೆಯನ್ನು ತನ್ನ ನಾಲಿಗೆಯಿಂದ ಅಸಹ್ಯವಾಗಿ ನೆಕ್ಕುತ್ತಾರೆ. ಈ ಸನ್ನಿವೇಶ ಚಿತ್ರೀಕರಣದ ಸಂದರ್ಭ ನಟಿ ಸದಾ ಬಹಳ ಇರಿಸು ಮುರಿಸು ಅನುಭವಿಸಿದ್ದನ್ನು ಹೇಳಿಕೊಂಡಿದ್ದಾರೆ.ಈ ದೃಶ್ಯದಲ್ಲಿ ತಾನು ನಟಿಸೋದಿಲ್ಲ ಎಂದು ಕೂಡ ನಟಿ ಸದಾ ಹೇಳಿದ್ದರಂತೆ.

ನಟಿಯ ಪಾಡು ನೋಡಿ ಗೋಪಿಚಂದ್ ಕೂಡ ಬೇಡ ಬಿಡಿ ಸರ್ ಈ ಸೀನ್ ಎಂದಿದ್ದರಂತೆ. ಆದರೂ ಕೂಡ ನಿರ್ದೇಶಕರಾದ ತೇಜಾ ಬಿಲ್ ಕುಲ್ ಈ ಮಾತನ್ನು ಕೇಳಲಿಲ್ಲವಂತೆ. ನೀನು ಈ ಸನ್ನಿವೇಶದಲ್ಲಿ ನಟಿಸಿದರೆ ಅದು ಹೆಚ್ಚು ಹೈಲೆಟ್ ಆಗುತ್ತದೆ ಎಂದು ಒತ್ತಾಯ ಮಾಡಿದ್ದರಂತೆ. ಕೊನೆಗೆ ಅಲ್ಲಿದ್ದವರೆಲ್ಲ ನಟಿ ಸದಾಗೆ ತಿಳಿ ಹೇಳಿದ ಮೇಲೆ ಒಲ್ಲದ ಮನಸ್ಸಿನಿಂದಲೇ ಸದಾ ಅಷ್ಟೆಲ್ಲಾ ಇರಿಸು ಮುರಿಸು ಅನುಭವಿಸಿದ್ದರು ಕೂಡ ಆ ಸೀನ್ ಮಾಡಿದ್ದರಂತೆ. ಆದರೆ ಈ ಘಟನೆ ಜೀವನದಲ್ಲಿ ಎಂದಿಗೂ ನೆನಪಿನಲ್ಲಿರುತ್ತದೆ ಎಂದು ಸದಾ ಹೇಳಿರುವುದಾಗಿ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇಂದಿಗೂ ಕೂಡ ಆ ಸಿನಿಮಾ ನೋಡುವ ಸಂದರ್ಭ ಆ ಸನ್ನಿವೇಶವನ್ನು ನಟಿ ಸದಾ ಸ್ಕಿಪ್‌ ಮಾಡುವುದನ್ನು ನಟಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ

ಇದನ್ನೂ ಓದಿ: Darshan: ಕಾವೇರಿ ನೀರು ಹಂಚಿಕೆ ವಿವಾದ: ಟ್ವೀಟ್‌ ಮಾಡಿದ ನಟ ದರ್ಶನ್‌, ಏನಂದ್ರು ಗೊತ್ತೇ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ