ಶನಿವಾರ, 24 ಅಕ್ಟೋಬರ್ 2026

Salman khan: ಸಿಗರೇಟ್ ಉರಿಸುತ್ತಲೇ ಬಿಗ್ ಬಾಸ್ ಶೋ ನಡೆಸಿದ ಸಲ್ಮಾನ್ ಖಾನ್ !

Salman khan : ಸಲ್ಮಾನ್ ಖಾನ್ ಅವರು ಸಿಗರೇಟ್ ಸೇದುತ್ತಲೇ ಬಿಗ್ ಬಾಸ್ ಒಟಿಟಿ ಸೀಸನ್ 2 ಕಾರ್ಯಕ್ರಮವನ್ನು ನಡೆಸಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

Salman khan
Image source: Free press journal

Salman Khan: ಬಿಗ್ ಬಾಸ್ ಭಾಷೆಗಳಲ್ಲಿಯೂ ಜನಪ್ರಿಯತೆಗಾಗಿ ಬಯಸಿರೋ ರಿಯಾಲಿಟಿ ಶೋ. ಮಲಯಾಳಂ, ಕನ್ನಡ, ತೆಲುಗು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ಹಿಂದಿ ಬಿಗ್ ಬಾಸ್ (ಬಿಗ್ ಬಾಸ್) ಹೊಸ ತಿರುವು ಸೇರಿದೆ. ‘ಹಿಂದಿ ಬಿಗ್ ಬಾಸ್ ಒಟಿಟಿ 2’ (ಬಿಗ್ ಬಾಸ್ OTT 2) ಆರಂಭವಾಗಿದೆ.

ಆದರೆ ಸಲ್ಮಾನ್ ಖಾನ್ ( salman khan ) ಅವರು ತಮ್ಮ ವರ್ತನೆಯಿಂದ ಟೀಕೆಗೆ ಗುರಿಯಾಗಿದ್ದಾರೆ. ರೂಲ್ಸ್ ಎಲ್ಲರಿಗೂ ಒಂದೇ ಅಲ್ವಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಹೌದು, ಸಲ್ಮಾನ್ ಖಾನ್ ಅವರು ಸಿಗರೇಟ್ ಸೇದುತ್ತಲೇ ಬಿಗ್ ಬಾಸ್ ಒಟಿಟಿ ಸೀಸನ್ 2 ಕಾರ್ಯಕ್ರಮವನ್ನು ನಡೆಸಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಬಿಗ್ ಬಾಸ್ ಒಟಿಟಿ 2 ಶೋನ ಶನಿವಾರದ ‘ವೀಕೆಂಡ್ ಕಾ ವಾರ್’ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಖಾನ್ ವೇದಿಕೆಯ ಮೇಲೆ ಕೈಯಲ್ಲಿ ಸಿಗರೇಟ್ ಹಿಡಿದು ಮಾತನಾಡುತ್ತಿರುವ ಫೋಟೊ ಲಭ್ಯವಾಗಿದೆ.

ಕೆಲವು ದಿನಗಳ ಹಿಂದಷ್ಟೇ ಬಿಗ್‌ಬಾಸ್ ಒಟಿಟಿ 2 ಶೋ ವೇಳೆ ಸ್ಪರ್ಧಿಗಳಾದ ಅಕಾಂಕ್ಷಾ ಪುರಿ ಹಾಗೂ ಜಡ್ ಹದಿದ್ ಅವರು ಲಿಪ್ ಲಾಕ್ ಮಾಡಿದ್ದರು. ಸಲ್ಮಾನ್ ಖಾನ್ ಅವರನ್ನು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡರು. “ಸಾರ್ವಜನಿಕವಾಗಿ ನಾವು ಹೇಗೆ ವರ್ತಿಸಬೇಕು ಎಂಬುದು ಗೊತ್ತಿರಬೇಕು. ಉದಾಹರಣೆಗೆ, ಇಂತಹ ಶೋಗಳಲ್ಲಿ ಕಿಸ್ ಮಾಡುವುದು, ಅಸಭ್ಯವಾಗಿ ವರ್ತಿಸುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳ ಬಗ್ಗೆ ನಮಗೆ ಅರಿವಿರಬೇಕು” ಎಂದು ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದರು.

ಇದಕ್ಕೆ ನಿದರ್ಶನವಾಗಿ “ಸಲ್ಮಾನ್ ಖಾನ್ ಅವರದ್ದು ಹಿಪೋಕ್ರಸಿಯ ವರ್ತನೆ. ಅವರು ಯಾರಿಗೆ ಬೋಧನೆ ಮಾಡಿದ್ದಾರೋ, ಅವರ ಎದುರಾದರೂ ಸಭ್ಯವಾಗಿ ವರ್ತಿಸಿದ್ದರು” ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲ್ಮಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಹೋಸ್ಟ್ ಮಾಡುವಾಗ ಸಿಗರೇಟ್ ಸೇದಿದ್ದು ದೊಡ್ಡ ತಪ್ಪು. ರೂಲ್ಸ್ ಎಲ್ಲರಿಗೂ ಒಂದೇ ಅಲ್ವಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುವಂತೆ ಮಾಡಿದ್ದು ಎಷ್ಟು ಸರಿ ಚರ್ಚೆಗೆ ಗ್ರಾಸವಾಗಿದೆ.

 

ಇದನ್ನೂ ಓದಿ: ಕುಮಾರಸ್ವಾಮಿಯ ಕಪ್ಪು ಪೆನ್ ಡ್ರೈವ್ ಸೋಮವಾರ ಬ್ಲಾಸ್ಟ್ ?!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ