ಶನಿವಾರ, 24 ಅಕ್ಟೋಬರ್ 2026

Krithi Shetty: ಕೋಟಿ ಕೋಟಿ ಕೊಟ್ಟರೂ ಸಿನಿಮಾ ಒಪ್ಕೊಳ್ತಿಲ್ಲ ಕೃತಿ ಶೆಟ್ಟಿ! ಈ ಕಾರಣದ ಹಿಂದಿದೆ ತಾಯಿಯ ಕೈವಾಡ?!

ಟಾಲಿವುಡ್​ನ (tollywood) ಕ್ಯೂಟ್ ನಟಿ ಕೃತಿ ಶೆಟ್ಟಿ ಸಿನಿರಸಿಕರಿಗೆ ಮೋಡಿ ಮಾಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ

Krithi Shetty

Krithi Shetty: ಕರಾವಳಿ ಮೂಲದ ನಟಿ ಕೃತಿ ಶೆಟ್ಟಿ (Krithi Shetty) ತೆಲುಗು ಚಿತ್ರರಂಗಕ್ಕೆ ‘ಉಪ್ಪೇನ’ (Uppena) ಚಿತ್ರದ ಮೂಲಕ ಕಾಲಿಟ್ಟಿದ್ದು, ಬುಚ್ಚಿ ಬಾಬು ನಿರ್ದೇಶನದಲ್ಲಿ ವೈಷ್ಣವ್ ತೇಜ್ ಅಭಿನಯದ ‘ಉಪ್ಪೇನ’ ಸಿನಿಮಾದ ಮೂಲಕ ಕೃತಿ ಶೆಟ್ಟಿ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದರು.

ಟಾಲಿವುಡ್​ನ (tollywood) ಕ್ಯೂಟ್ ನಟಿ ಕೃತಿ ಶೆಟ್ಟಿ ಸಿನಿರಸಿಕರಿಗೆ ಮೋಡಿ ಮಾಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಉಪ್ಪೇನ ಹಿಟ್ ಸಿನಿಮಾದ ನಂತರ ನಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದಿದ್ದು, ಸತತ ಮೂರು ಹಿಟ್‌ಗಳನ್ನು ನೀಡಿ, ಹ್ಯಾಟ್ರಿಕ್ ಹಿಟ್‌ಗಳನ್ನು ದಾಖಲಿಸಿದ್ದಾರೆ.

ಆದರೆ, ನಟಿ, ‘ದಿ ವಾರಿಯರ್’ (the worrier) ಚಿತ್ರದ ಮೂಲಕ ಮೊದಲ ಫ್ಲಾಪ್ ಅನುಭವಿಸಿದರು. ಇತ್ತೀಚೆಗಷ್ಟೇ ನಟಿ, ನಿತಿನ್ (Nithin) ಅವರ ಜೊತೆಗಿನ ‘ಮಾಚರ್ಲ ನಿಯೋಜಕವರ್ಗಂ’ ಸಿನಿಮಾದಲ್ಲಿ ನಟಿಸಿದ್ದು, ಇದು ಕೂಡ ಫ್ಲಾಪ್ ಪೇಜ್ ಸೇರಿಕೊಂಡಿದೆ. ಸತತ ಹಿಟ್ ಸಿನಿಮಾ ನೀಡಿದ ನಟಿಯ ನಂತರದ ಸಿನಿಮಾಗಳು ಮಕಾಡೆ ಮಲಗಿದವು.

ಈ ಮಧ್ಯೆ ನಟಿಯ ಬಗ್ಗೆ ಹೊಸ ವಿಚಾರ ಕೇಳಿಬರುತ್ತಿದೆ. ಹೌದು, ಕೃತಿ ಶೆಟ್ಟಿ ಕೋಟಿ ಕೋಟಿ ಕೊಟ್ಟರೂ ಸಿನಿಮಾ ಒಪ್ಕೊಳ್ತಿಲ್ಲವಂತೆ. ಯಾಕೆ ಗೊತ್ತಾ? ಇದಕ್ಕೆ ಕಾರಣ ಅವರ ತಾಯಿ!!.

ಹೌದು, ಕೃತಿ ಶೆಟ್ಟಿ ಅವರ ಪ್ರತಿ ಸಿನಿಮಾದಲ್ಲಿ 1.5 ಕೋಟಿ ರೂಪಾಯಿ ಕೊಡೋಕೆ ರೆಡಿ ಇದ್ದಾರೆ. ಆದರೂ ನಟಿ ಸಿನಿಮಾ ಒಪ್ಪಿಕೊಳ್ತಿಲ್ಲಾ. ಕಾರಣ, ಕೃತಿ ಜೊತೆ ಅವರ ತಾಯಿಯೂ ಕಥೆ ಕೇಳುತ್ತಿದ್ದಾರಂತೆ. ಹೀಗಾಗಿ, ಅನೇಕ ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದಾರೆ. ಅನೇಕ ಹೀರೋಯಿನ್​ಗಳು ಸಿಕ್ಕ ಎಲ್ಲಾ ಆಫರ್​ಗಳನ್ನು ಒಪ್ಪಿಕೊಂಡು ಬಿಡುತ್ತಾರೆ. ಆ ರೀತಿ ಆಗಬಾರದು ಅನ್ನೋದು ಅವರ ತಾಯಿಯ ಆಶಯ. ಸದ್ಯ ಕೃತಿ ಶೆಟ್ಟಿ ಅವರ ತಾಯಿಯ ನಿರ್ಧಾರದ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದು, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ