ಭಾನುವಾರ, 25 ಅಕ್ಟೋಬರ್ 2026
Trending

Harshit Rana: KKR ಸ್ಟಾರ್ ಆಟಗಾರನಿಗೆ ಬಿಗ್ ಶಾಕ್ : ದಂಡದ ಜೊತೆಗೆ ಬ್ಯಾನ್

Harshit Rana: ಪ್ರಸಕ್ತy ಋತುವಿನಲ್ಲಿ, ರಾಣಾ ಎರಡನೇ ಬಾರಿಗೆ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾದರು.

Harshit Rana

Harshit Rana: ಕೆಕೆಆರ್ ತಂಡದ ಸ್ಟಾರ್ ಬೌಲರ್ ಹರ್ಷಿತ್ ರಾಣಾಗೆ ಭಾರೀ ಆಘಾತ ಎದುರಾಗಿದೆ. ಏಪ್ರಿಲ್ 29ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕವನ್ನು ಶೇಕಡಾ 100 ರಷ್ಟು ಕಡಿತಗೊಳಿಸಲಾಗಿದೆ. ಪ್ರಸಕ್ತy ಋತುವಿನಲ್ಲಿ, ರಾಣಾ ಎರಡನೇ ಬಾರಿಗೆ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾದರು.

Sponsored

ಇದನ್ನೂ ಓದಿ:  Mangaluru: ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ; ರೈಲು ಸಂಚಾರದಲ್ಲಿ ವ್ಯತ್ಯಯ

ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ತಂಡದ ಬ್ಯಾಟ್ಸ್ ಮನ್ ಅಭಿಷೇಕ್ ಪೊರೆಲ್ ಜತೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ರಾಣು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಅಭಿಷೇಕ್‌ನ ಔಟಾದ ನಂತರ, ರಾಣಾ ಕಿಚಾಯಿಸಿದ್ದರು. (ಕೋಪದಿಂದ ಡಗೌಟ್‌ಗೆ ಹೋಗಲು ಅಭಿಷೇಕ್‌ಗೆ ಆದೇಶಿಸಿದರು).

ಇದನ್ನೂ ಓದಿ:  LPG Cylinder Price: ಮೇ ತಿಂಗಳ ಮೊದಲ ದಿನ ಸಿಹಿ ಸುದ್ದಿ; ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದರ ಕುಸಿತ

ಕೆಲ ದಿನಗಳ ಹಿಂದೆ ರಾಣಾ ಈ ರೀತಿ ವರ್ತಿಸಿ ದಂಡ ಎದುರಿಸಿದ್ದರು. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ, ಮಯಾಂಕ್ ಅಗರ್ವಾಲ್ ಔಟಾದ ನಂತರ, ಅವರು ಅತಿಯಾಗಿ ಪ್ರತಿಕ್ರಿಯಿಸಿದರು (ಪ್ರೈಯಿಂಗ್ ಕಿಸ್ ನೀಡಿ ಕೋಪಗೊಂಡರು). ಅದಕ್ಕಾಗಿ ಪಂದ್ಯ ಶುಲ್ಕದ ಶೇ.60ರಷ್ಟು ದಂಡ ವಿಧಿಸಲಾಗಿದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಣಾ ಅತಿಯಾಗಿ ಬೌಲಿಂಗ್ ಮಾಡಿದ್ದರು. 4 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ 2 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಕೆಕೆಆರ್ ತಂಡ ಡೆಲ್ಲಿ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತ್ತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಮಾತ್ರ ಗಳಿಸಿತು. ಫಿಲಿಪ್ ಸಾಲ್ಟ್ (68) ಅದ್ಭುತ ಇನಿಂಗ್ಸ್ ಆಡಿದ್ದು, ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದಕ್ಕೂ ಮುನ್ನ ಕೆಕೆಆರ್ ಬೌಲರ್ ಗಳ ಅಬ್ಬರದಿಂದ ಡೆಲ್ಲಿ ಅಲ್ಪ ಮೊತ್ತಕ್ಕೆ ಸೀಮಿತವಾಗಿತ್ತು. ಕುಲದೀಪ್ ಯಾದವ್ (ಔಟಾಗದೆ 35) ತಂಡದ ಅಗ್ರ ಸ್ಕೋರ‌ರ್ ಎನಿಸಿಕೊಂಡರು. ವರುಣ್ ಚಕ್ರವರ್ತಿ 4 ಓವರ್‌ಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದರು. ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ತಲಾ 2, ಸ್ಟಾರ್ಕ್ ಮತ್ತು ನರೈನ್ ತಲಾ 2 ವಿಕೆಟ್ ಪಡೆದಿದ್ದಾರು.