Nandini Gupta : ರಾಜಸ್ಥಾನ ಮೂಲದ 19ರ ತರುಣಿಗೆ ಒಲಿದ ʼಫೆಮಿನಾ ಮಿಸ್ ಇಂಡಿಯಾʼ ಪಟ್ಟ! ಅಷ್ಟಕ್ಕೂ ಈಕೆ ಯಾರು ಗೊತ್ತೇ?
ಈ ಬಾರಿಯ ಮಿಸ್ ಇಂಡಿಯಾ 2023 ವಿಜೇತರಾಗಿರುವ ನಂದಿನಿ ಗುಪ್ತಾ(Nandini Gupta) ಅವರು ಈ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ.
Nandini Gupta : ಝಗಮಗಿಸುವ ಅಲಂಕಾರ, ಕಣ್ಣು ಕುಕ್ಕುವ ಲೈಟಿಂಗ್ ಇದರ ನಡುವೆ ವಿಭಿನ್ನ ವಸ್ತ್ರ ವಿನ್ಯಾಸ ಧರಿಸಿ ರ್ಯಾಂಪ್ ವಾಕ್ ಮಾಡುವ ಸುಂದರಿಯರು. ಮೋಹಕ ಮೈ ಮಾಟದ ಜೊತೆಗೆ ತಮ್ಮ ಬುದ್ದಿವಂತಿಕೆಯ ಪ್ರದರ್ಶನಗೈಯುತ್ತ ಹೆಜ್ಜೆ ಹಾಕುವ ಮಹಿಳಾಮಣಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಾ ಸಾಗುತ್ತಾರೆ. ಈ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಇತ್ತೀಚೆಗೆ ನಡೆದ 59ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧೆ ನೀಡಿದ್ದರು. ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ 2023 (Miss India 2023) ಪಟ್ಟವನ್ನು ರಾಜಸ್ಥಾನದ ಕೋಟಾ ಮೂಲದ ಯುವತಿ ನಂದಿನಿ ಗುಪ್ತಾ (Rajasthan’s Nandini Gupta wins Miss India 2023)ಮುಡಿಗೇರಿಸಿಕೊಂಡಿದ್ದಾರೆ.
Sponsoredಈ ಬಾರಿಯ ಮಿಸ್ ಇಂಡಿಯಾ 2023 ವಿಜೇತರಾಗಿರುವ ನಂದಿನಿ ಗುಪ್ತಾ(Nandini Gupta) ಅವರು ಈ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಇವರು ಸದ್ಯ, ವಿದ್ಯಾರ್ಥಿನಿಯಾಗಿದ್ದು(Student)ಬ್ಯುಸಿಸೆನ್ ಮ್ಯಾನೆಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದು ಜೊತೆಗೆ ಮಾಡೆಲ್ ಕೂಡ ಆಗಿದ್ದಾರೆ. ಭಾನುವಾರ ರಾತ್ರಿ ಮಣಿಪುರದ ಇಂಫಾಲದಲ್ಲಿ ನಡೆದ ಇವೆಂಟ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಹಲವು ಸಿನಿರಂಗದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಕೇವಲ 19ರ ಹರೆಯದಲ್ಲೇ ತನ್ನ ಸೌಂದರ್ಯದ (Beauty)ಮೂಲಕ ಮಿಸ್ ಇಂಡಿಯಾ ಆಗಿರುವ ಪ್ರತಿಭೆ ನಂದಿನಿ ಅವರ ಈ ಸಾಧನೆಗೆ ರತನ್ ಟಾಟಾ (Rathan Tata)ಅವರು ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಜೊತೆಗೆ ಬುದ್ದಿವಂತಿಕೆಯ ಉತ್ತರಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರ ಜೊತೆಗೆ ತೀರ್ಪುಗಾರರ (Judge)ಮನ ಗೆದ್ದಿದ್ದಾರೆ.

ಈ ವರ್ಷ ತೆಲುಗು ರಾಜ್ಯಗಳ ಗೋಮತಿ (AP) ಮತ್ತು ಊರ್ಮಿಳಾ ಚೌಹಾಣ್ (Telangana) ಅವರು ನಂದಿನಿ ಅವರಿಗೆ ಟಫ್ ಕಾಂಪೇಟಿಶನ್ ನೀಡಿದ್ದರು ಎನ್ನಲಾಗಿದೆ. ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಇದರ ಜೊತೆಗೆ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆಗಿ ಮಿಂಚಿದ್ದಾರೆ.





