ಶನಿವಾರ, 24 ಅಕ್ಟೋಬರ್ 2026

Bigg Boss Kannada 11: ‘ಬಿಗ್ ಬಾಸ್’ ಮನೆಯಿಂದ ಚಂದುಳ್ಳಿ ಚೆಲುವೆ ಅನುಷಾ ರೈ ಔಟ್

Bigg Boss Kannada 11: ಕನ್ನಡ ಬಿಗ್ ಬಾಸ್ 11ರ (Bigg Boss Kannada 11) ಆಟ ಮಜಾ ತುಂಬಾ ಜೋರಾಗಿದೆ. ಆದ್ರೆ ಇದೀಗ ಅಚ್ಚರಿ ಎಂಬಂತೆ ದೊಡ್ಮನೆಯ ಗಟ್ಟಿ ಸ್ಪರ್ಧಿಯಾಗಿರುವ ಅನುಷಾ ರೈ ಬಿಗ್ ಬಾಸ್ ಮನೆಯ ಆಟ‌ದಿಂದ ಔಟ್ ಆಗಿದ್ದಾರೆ.

Bigg Boss Kannada 11: ಕನ್ನಡ ಬಿಗ್ ಬಾಸ್ 11ರ (Bigg Boss Kannada 11) ಆಟ ಮಜಾ ತುಂಬಾ ಜೋರಾಗಿದೆ. ಆದ್ರೆ ಇದೀಗ ಅಚ್ಚರಿ ಎಂಬಂತೆ ದೊಡ್ಮನೆಯ ಗಟ್ಟಿ ಸ್ಪರ್ಧಿಯಾಗಿರುವ ಅನುಷಾ ರೈ ಬಿಗ್ ಬಾಸ್ ಮನೆಯ ಆಟ‌ದಿಂದ ಔಟ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋಗೆ ಕಾಲಿಡುವಾಗ ಧರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ ಅವರು ಜೋಡಿಯಾಗಿ ಬಂದಿದ್ದರು. ವಿಶೇಷ ಅಂದ್ರೆ 50ನೇ ದಿನದಲ್ಲಿ ಅವರು ಎಲಿಮಿನೇಷನ್​ನ ಕೊನೆಯ ಹಂತಕ್ಕೂ ಜೋಡಿಯಾಗಿಯೇ ಬಂದರು. ಅಂತಿಮವಾಗಿ ಅನುಷಾ ರೈ ಅವರ ಆಟ ಅಂತ್ಯವಾಗಿದೆ. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.

ಟಾಸ್ಕ್ ಅಂತ ಬಂದಾಗ ಬೇರೆ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಅನುಷಾ ಆಟ ಆಡುತ್ತಿದ್ದರು. ಅದರೊಂದಿಗೆ ಧರ್ಮ ಅವರ ಜೊತೆಗಿನ ಸ್ನೇಹದ‌ ವಿಚಾರ ನಟಿ ಹೈಲೈಟ್ ಆಗಿದ್ದರು.
ಮಹಾನುಭಾವರು, ಖಡಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಜೊತೆ ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ