ಸೋಮವಾರ, 26 ಅಕ್ಟೋಬರ್ 2026
Trending

ವಿಟ್ಲ: ವಿದ್ಯುತ್‌ ಕಂಬಕ್ಕೆ ಶಾಲಾ ಬಸ್‌ ಡಿಕ್ಕಿ

ವಿಟ್ಲ: ಚಾಲಕನ ನಿಯಂತ್ರಣ ಕಳೆದು ಶಾಲಾ ಬಸ್ಸೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ನಡೆದಿದೆ.

Sponsored

ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಬಸ್‌ ಕುಂಟುಕುಡೇಲು ಇಳಿಜಾರಿನ ರಸ್ತೆಯಲ್ಲಿ ತಾಂತ್ರಿಕ ದೋಷದಿಂದ ನೇರವಾಗಿ ಕೆಳಗಡೆ ಚಲಿಸಿದ್ದು, ನಂತರ ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್‌ ಹಾನಿಗೊಳಗಾಗಿದ್ದು, ವಿದ್ಯುತ್‌ ಕಂಬ ಸಂಪೂರ್ಣ ತುಂಡಾಗಿದೆ.