ಸೋಮವಾರ, 26 ಅಕ್ಟೋಬರ್ 2026
Trending

ಉಳ್ಳಾಲ: ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್‌ ಡಿಕ್ಕಿ, ಸಚಿವ ಯು ಟಿ ಖಾದರ್‌ ಸಂಬಂಧಿ ಸ್ಥಳದಲ್ಲೇ ಸಾವು

ಉಳ್ಳಾಲ,ಆ.24: ಸ್ಕೂಟರ್‌ ಸವಾರರೊಬ್ಬರು ಪಡಿತರ ಅಕ್ಕಿ ಸಾಗಾಟದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾದ ಘಟನೆ ರಾ.ಹೆ.66 ರ ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

Sponsored

ಉಳ್ಳಾಲ ಸುಭಾಷ್‌ ನಗರ ಬಳಿಯ ಬಿರ್ಲಾ ಕಂಪೌಂಡ್‌ ನಿವಾಸಿ ಪಿ.ಎನ್‌.ಇಬ್ರಾಹಿಂ (70) ಮೃತಪಟ್ಟ ವ್ಯಕ್ತಿ. ಇಬ್ರಾಹಿಂ ಅವರು ಸೋಮವಾರ ಮಧ್ಯಾಹ್ನ ಸ್ಕೂಟರಲ್ಲಿ ಮಂಗಳೂರಿನಿಂದ ಮಂಗಳಾದೇವಿ ಒಳ ಮಾರ್ಗವಾಗಿ ಉಳ್ಳಾಲಕ್ಕೆ ಮರಳುತ್ತಿದ್ದ ಸಮಯದಲ್ಲಿ ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್‌ನಲ್ಲಿ ಹೆದ್ದಾರಿ ದಾಟುವಾಗ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಪಡಿತರ ಅಕ್ಕಿ ಸಾಗಾಟದ ಲಾರಿಯ ಇಂಧನ ಟ್ಯಾಂಕಿನ ಭಾಗದ ರಕ್ಷಣಾ ಸಲಾಕೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆನ್ನಲಾಗಿದೆ.

ಪುತ್ತೂರು ನಿವಾಸಿಯಾಗಿರುವ ಇಬ್ರಾಹಿಂ ಈ ಹಿಂದೆ ವಿದೇಶದಲ್ಲಿದ್ದು, ಪ್ರಸ್ತುತ ಉಳ್ಳಾಲದ ಬಿರ್ಲಾ ಕಾಂಪೌಂಡ್‌ನಲ್ಲಿ ನೆಲೆಸಿದ್ದರೆನ್ನಲಾಗಿದೆ. ಮೃತ ಇಬ್ರಾಹಿಂ ಅವರು ಆರೋಗ್ಯ ಸಚಿವ ಯು ಟಿ ಖಾದರ್‌ ಅವರ ಸಹೋದರ ಇಫ್ತಿಕಾರ್‌ ಅಲಿ ಅವರ ಮಾವನ (ಪತ್ನಿಯ ತಂದೆ) ಸಹೋದರ.