ಶನಿವಾರ, 24 ಅಕ್ಟೋಬರ್ 2026

ನೆಲ್ಯಾಡಿ: ಸರಣಿ ಅಪಘಾತ, ಮದ್ಯ ಸಾಗಾಟದ ಲಾರಿ ಪಲ್ಟಿ

ಕಡಬ: ನೆಲ್ಯಾಡಿ ಗ್ರಾಮದ ಬೆಥನಿ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶನಿವಾರ ನಸುಕಿನ ಜಾವ 5 ಗಂಟೆಗೆ ಸರಣಿ ಅಪಘಾತ ನಡೆದಿದ್ದು, ಮದ್ಯದ ಲೋಡ್‌ ತುಂಬಿದ್ದ ಲಾರಿ ಸೇರಿ ಮೂರು ವಾಹನಗಳು ಜಖಂಗೊಂಡಿದೆ. ಎರಡು ಲಾರಿ ಹಾಗೂ ಟ್ಯಾಂಕರ್‌ ಮಧ್ಯೆ ಅಪಘಾತ ನಡೆದಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ರಾಜ ಎಂ (56) ಅವರಿಗೆ ಸೇರಿದ ಮದ್ಯದ ಲೋಡ್‌ ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಿಕ್ಕರ್‌ ತುಂಬಿದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನೆಲ್ಯಾಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಲಾರಿ ಮಾಲೀಕ ರಾಜ ಎಂ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.