ಸೋಮವಾರ, 26 ಅಕ್ಟೋಬರ್ 2026
Trending

ಮಂಗಳೂರು: ವಳಚ್ಚಿಲ್‌ ಬಳಿ ಕಾರು ಹಿಟ್‌ ಆಂಡ್‌ ರನ್‌-ಯುವಕ ಸ್ಥಳದಲ್ಲೇ ಸಾವು

ಮಂಗಳೂರು, ಆ.12: ನಗರ ಹೊರವಲಯದ ವಳಚ್ಚಿಲ್‌ ಬಳಿಯ ಹೊಸ ಪೆಟ್ರೋಲ್‌ ಪಂಪ್‌ ಎದುರಲ್ಲಿ ಕಾರೊಂದು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ತೀವ್ರ ಗಾಯಗೊಂಡ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Sponsored

ಸೂರಲ್ಪಾಡಿಯ ಹ್ಯಾರಿಸ್‌ ಮೃತ ಯುವಕ ಎಂದು ಗುರುತಿಸಲಾಗಿದೆ. ರಾತ್ರಿ ಹತ್ತು ಗಂಟೆ ಸಮಯಕ್ಕೆ ಈ ಘಟನೆ ನಡೆದಿದ್ದು, ಕಾರಿನ ರಭಸಕ್ಕೆ ಬೈಕ್‌ ಸವಾರ ದೂರಕ್ಕೆ ಎಸೆಯಲ್ಪಟ್ಟಿದ್ದು, ತೀವ್ರ ಗಾಯಗೊಂಡು ರಸ್ತೆಯಲ್ಲಿಯೇ ಬಿದ್ದು ಮೃತಪಟ್ಟಿದ್ದಾನೆ.

Advertisement

ಕಂಕನಾಡಿ ಟ್ರಾಫಿಕ್‌ ಪೊಲೀಸರು ಅಜಾಗರೂಕತೆಯ ಚಾಲನೆ ಮತ್ತು ಅಪಘಾತ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.