ಕೋಟ: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಸೈಕಲ್ ಸವಾರ ಮೃತಪಟ್ಟ ಘಟನೆ ಕೋಟ ಅಮೃತೇಶ್ವರಿ ಸರ್ಕಲ್‌ನಲ್ಲಿ ಸೋಮವಾರ (ಅ.26) ಬೆಳ್ಳಂಬೆಳಗ್ಗೆ ನಡೆದಿದೆ. ಹಿರಿಯ ಆರ್‌ಎಸ್‌ಎಸ್ ಸದಸ್ಯ ಕೋಟ ಗುರುದಾಸ್ ಶೆಣೈ (65) ಮೃತ ಸೈಕಲ್ ಸವಾರ.
Sponsoredಇಂದು ಬೆಳಗ್ಗೆ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಕುಂದಾಪುರ ಕಡೆ ಸಂಚರಿಸುತ್ತಿದ್ದ ಕಾರು ಸೈಕಲ್‌ಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಶೆಣೈ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಕಾರು ಚಾಲಕ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಆರ್ ಎಸ್ ಎಸ್ ಕಟ್ಟಾಳುವಾಗಿದ್ದು, ಸ್ವಯಂಸೇವಕರಿಗೆ ಶಾಖೆಗಳನ್ನು ನಡೆಸುತ್ತಿದ್ದರು.





