ಶುಕ್ರವಾರ ಮುಂಜಾನೆ ಪ್ರಯಾಣಿಕರಿಂದ ತುಂಬಿದ ಬಸ್ಸೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 40 ಜನರು ಸಾವಿಗೀಡಾಗಿದ್ದು, ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
Sponsoredಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳ ಗಡಿ ಭಾಗದ ದೂರದ ಪ್ರದೇಶವಾದ ಡಾನಾ ಸಾರ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ ಎಂದು ಬಲೂಚಿಸ್ತಾನ್ ಸರಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್ ತನ್ನಲ್ಲಿದ್ದ ಪ್ರಯಾಣಿಕರನ್ನಷ್ಟೇ ಅಲ್ಲದೇ, ಮಾರ್ಗಮಧ್ಯೆ ಕಟ್ಟು ನಿಂತಿದ್ದ ಮತ್ತೊಂದು ಬಸ್ಸಿನ ಪ್ರಯಾಣಿಕರನ್ನು ಹತ್ತಿಕೊಂಡು, ಮಿತಿಗಿಂತ ಹೆಚ್ಚು ಜನ ತುಂಬಿದ್ದರು.
ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದಿದೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಈ ದುರಂತಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
Heartbreaking news from Balochistan: 🚌 🚨 🚨
A passenger bus met with a tragic accident after plunging into a deep ravine in the Danasar area. 40 people lost their lives, while 8 others sustained injuries. pic.twitter.com/C0b0vfjBhQ— Ayesha Ufaq (@Ufaq_RM) July 3, 2026




