Chikkamagaluru : ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಹೊರಟ ಗುಂಡು ತಗುಲಿ ಯುವಕನೊಬ್ಬ ಸಾವಿಗೀಡಾದ ಘಟನೆ ಗುರುವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ..
Sponsoredಇದನ್ನೂ ಓದಿ: Bantwala: ಬಾವಿಗೆ ಬಿದ್ದ ಮಗು ರಕ್ಷಿಸಿದ ಯುವಕ : ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ವ್ಯಾಪಕ ಶ್ಲಾಘನೆ
ಮೃತಪಟ್ಟ ಯುವಕನನ್ನು ಕೆರೆಮಕ್ಕಿ ಗ್ರಾಮದ ಸಂಜು(33) ಎಂದು ಹೇಳಲಾಗಿದೆ. ಎದೆಗೆ ತೋಟದ ಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿತ್ತು ಎನ್ನಲಾಗಿದೆ.ಮೃತದೇಹದ ಸಮೀಪ ತೋಟದ ಬೇಲಿಯಲ್ಲಿ ತೋಟೆ ಕೋವಿ ಪತ್ತೆಯಾಗಿದೆ.
ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Comments are closed.