ಸೋಮವಾರ, 26 ಅಕ್ಟೋಬರ್ 2026
Trending

HSRP: ಇಂತಹ ವಾಹನಗಳಿಗೆ HSRP ಅಳವಡಿಕೆಯಿಂದ ಸಿಗಲಿದೆ ರಿಯಾಯಿತಿ !!

HSRP: ಇಂತಹ ವಾಹನಗಳಿಗೆ HSRP ಅಳವಡಿಕೆಯಿಂದ ರಿಯಾಯಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

HSRP: ಸಾರಿಗೆ ಇಲಾಖೆಯ ಸೂಚನೆಯಂತೆ 2019ರ ಒಳಗೆ ವಾಹನ ಖರೀದಿಸಿದಂತ ಮಾಲಿಕಕರು 2024, ಮೇ 31ರ ಒಳಗೆ ತಮ್ಮ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಗಡುವು ಮುಗಿಯುವ ಹಂತ ತಲುಪುತ್ತಿದ್ದಂತೆ HSRP ಅಳವಡಿಕೆ ಸಂಖ್ಯೆಯು ಹೆಚ್ಚುತ್ತಿದೆ. ಆದರೆ ಇಂತಹ ವಾಹನಗಳಿಗೆ HSRP ಅಳವಡಿಕೆಯಿಂದ ರಿಯಾಯಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

Sponsored

ಇದನ್ನೂ ಓದಿ: Kitchen Tips: ಗ್ಯಾಸ್ ಬರ್ನರ್ ನಲ್ಲಿ ಜಿಡ್ಡು ತುಂಬಿದ್ರೆ ನಿಮಿಷದಲ್ಲೇ ಈ ರೀತಿ ಕ್ಲೀನ್ ಮಾಡಿ !

ಹೌದು, ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಅದರ ಅಧಿಕೃತ ಕಂಪನಿಗಳಿಂದ ಪಡೆಬೇಕಿದೆ. ಆದರೆ ಈಗ ನೋಂದಣಿಗೆ ಮುಂದಾಗಿರುವ fiat, cielo ambassador, LML, kinetic honda ಮುಂತಾದ ವಾಹನಗಳ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಯಾಕೆಂದರೆ ಇಂತಹ ಹಲವು ಕಂಪನಿಗಳು ಸದ್ಯಕ್ಕೆ ಇಲ್ಲ. ಕೆಲವು ಕಂಪನಿಗಳು ಭಾರತದ ತಯಾರಿಕಾ ಘಟಕ ಮುಚ್ಚಿ ವಿದೇಶಕ್ಕೆ ಸ್ಥಳಾಂತರಗೊಂಡಿವೆ. ಆದ್ದರಿಂದ ಅಧಿಕೃತ ಮಾರಾಟಗಾರರನ್ನು ಹುಡುಕುವುದು ಹೇಗೆ? ಎಂಬುದು ವಾಹನ ಮಾಲೀಕರ ಪ್ರಶ್ನೆಯಾಗಿದೆ.

ಇದನ್ನೂ ಓದಿ: Mosquito control: ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಹತ್ತಿರ ಈ ಗಿಡ ನೆಡಿ ಸಾಕು !!

ಅಂದಹಾಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ನೋಂದಣಿಗಾಗಿ ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾರಾಟಗಾರರನ್ನು ಆಯ್ಕೆ ಮಾಡಬೇಕು. ಆದರೆ ದೇಶದಲ್ಲಿ ತಯಾರಿಕಾ ಘಟಕ ಮುಚ್ಚಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಹೇಗೆ? ಎಂಬುದು ಹೊಸ ಸಮಸ್ಯೆಯಾಗಿದೆ. ಹೀಗಾಗಿ ಈ ತಾಂತ್ರಿಕ ಕಾರಣದಿಂದ ಮೇ 31ರ ಗಡುವಿನೊಳಗೆ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ನಿರ್ದೇಶನ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.

ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ಇಂತಹ ಹಳೆಯ ಕಂಪೆನಿ ವಾಹನಗಳಿಗೆ HSRP ಅಳವಡಿಕೆಯಿಂದ ರಿಯಾಯಿತಿ ಸಿಗುತ್ತದೆಯಾ ಎಂದು ನೋಡಬೇಕಿದೆ. ಇಲ್ಲ ಇದಕ್ಕೆ ಬೇರೆ ಏನಾದರೂ ಪರ್ಯಾಯ ವ್ಯವಸ್ಥೆ ಏನಾದರೂ ಸರ್ಕಾರ ಮಾಡಬಹುದೇ? ಎಂದು ತಿಳಿಯಬೇಕಿದೆ.