Kitchen Tips: ಗ್ಯಾಸ್​ ಬರ್ನರ್​ ನಲ್ಲಿ ಜಿಡ್ಡು ​ತುಂಬಿದ್ರೆ ನಿಮಿಷದಲ್ಲೇ ಈ ರೀತಿ ಕ್ಲೀನ್ ಮಾಡಿ !

Kitchen Tips: ಅಡುಗೆ ಮನೆಯಲ್ಲಿ ದಿನವಿಡೀ ಅಡುಗೆ ಮಾಡೋರಿಗೆ ಮತ್ತು ಗ್ಯಾಸ್ ಸ್ಟವ್ ಗೆ ರೆಸ್ಟ್ ಅನ್ನೋದು ಇರೋದಿಲ್ಲ. ಅದರಲ್ಲೂ ಅಡುಗೆ ಮನೆ ಕೆಲಸ ಮುಗಿಯದ ಕೆಲಸ ಅಂದ್ರೆ ತಪ್ಪಾಗಲಾರದು. ಆದ್ರೆ ಅಡುಗೆ ಮಾಡಿ ಕ್ಲೀನಿಂಗ್ ಮಾಡೋದು ಒಂದು ದೊಡ್ಡ ಸಮಸ್ಯೆ. ಇನ್ನು ಸ್ಟವ್ ಕ್ಲೀನಿಂಗ್ ಮಾಡೋದು ಒಂದು ದೊಡ್ಡ ತಲೆನೋವು ಅನ್ನೋರಿಗೆ ಇಲ್ಲಿದೆ ಸ್ಟವ್ ಕ್ಲೀನ್ ಮಾಡೋ ಸುಲಭ ಟಿಪ್ಸ್ (Kitchen Tips).

ಮುಖ್ಯವಾಗಿ ಸ್ಟವ್ ನಿರಂತರ ಬಳಕೆಯಿಂದಾಗಿ ಬರ್ನರ್ (Gas Burner) ಬೇಗ ಜಿಡ್ಡು ಹಿಡಿಯುತ್ತದೆ. ಅದಕ್ಕಾಗಿ ಬರ್ನರ್ ಅನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆದ್ದರಿಂದ, ನಿಮ್ಮ ಗ್ಯಾಸ್ ಬರ್ನರ್ಗಳು ಕಪ್ಪು ಆಗಿದ್ದರೆ, ಮೊದಲು ಬರ್ನರ್ ತೆಗೆದುಹಾಕಿ. ನಂತರ ಹತ್ತಿ ಬಟ್ಟೆಯಿಂದ ಒರೆಸಿ. ಈಗ ಒಂದು ಬಟ್ಟಲಿನಲ್ಲಿ ಒಂದು ಚಮಚ ಪಾತ್ರೆ ತೊಳೆಯುವ ಲಿಕ್ವೆಡ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟ ಬೆಚ್ಚಗಿನ ನೀರನ್ನು ಸೇರಿಸಿ. ನಂತರ ಅದರಲ್ಲಿ ಬರ್ನರ್ ಹಾಕಿ.

ನೀರು ತಣ್ಣಗಾದಾಗ ಬರ್ನರ್ ಅನ್ನು ತೆಗೆದುಹಾಕಿ ಮತ್ತು ಸ್ಕ್ರ್ಯಾಚ್ ಬ್ರೆಷ್ ನಿಂದ ಸ್ವಚ್ಛಗೊಳಿಸಿ. ಇದರಿಂದ ಕೆಲ ನಿಮಿಷಗಳಲ್ಲೇ ಸ್ಟವ್ ಮೇಲಿನ ಕೊಳಕು ಮತ್ತು ಕಪ್ಪು ಕಲೆ ಮಯಾವಾಗಿ ಫಳ-ಫಳ ಹೊಳೆಯುತ್ತದೆ.

ಅಥವಾ ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ನಿಂಬೆ ರಸ, ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಡಿಶ್ ವಾಶರ್ ಲಿಕ್ವೆಡ್ ಮಿಕ್ಸ್ ಮಾಡಿ. ಈಗ ಬರ್ನರ್ ಅನ್ನು ನೀರಿನಲ್ಲಿ ಹಾಕಿ ಎರಡು ನಿಮಿಷಗಳ ಕಾಲ ಬಿಡಿ. ನಂತರ ರಸ್ಕೊಚ್ ಬ್ರ್ಯಾಟ್ ಬಳಸಿ ಬರ್ನರ್ ಅನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮಿಷಗಳಲ್ಲಿ ಬರ್ನರ್ ಕ್ಲೀನ್ ಆಗುತ್ತದೆ.

ಇದನ್ನೂ ಓದಿ: Mosquito control: ಸೊಳ್ಳೆ ಕಾಟದಿಂದ ಪರ್ಮನೆಂಟ್ ಆಗಿ ಬಚಾವ್ ಆಗ್ಬೇಕಾ? ಹಾಗಿದ್ರೆ ಮನೆ ಹತ್ತಿರ ಈ ಗಿಡ ನೆಡಿ ಸಾಕು !!

ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಒಂದು ಚಮಚ ಡಿಶ್ ವಾಶರ್ ಲಿಕ್ವೆಡ್ ಮತ್ತು ಸ್ವಲ್ಪ ಸರ್ಫ್ ಸೇರಿಸಿ. ಈ ನೀರಿಗೆ ಒಂದು ನಿಂಬೆ ಹಣ್ಣಿನ ರಸ ಮತ್ತು ಒಂದು ಚಮಚ ಅಡಿಗೆ ಸೋಡಾ ಬೆರೆಸಿ ಗ್ಯಾಸ್ ಬರ್ನರ್ ಅದರೊಳಗೆ ಹಾಕಿ, ಕೆಲವು ನಿಮಿಷಗಳ ಕಾಲ ಬಿಡಿ. 20 ನಿಮಿಷಗಳ ನಂತರ ಬರ್ನರ್ ಅನ್ನು ಬ್ರಷ್ನಿಂದ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮಿಷಗಳಲ್ಲೇ ಬರ್ನರ್ ಕ್ಲೀನ್ ಆಗುತ್ತದೆ.

ಇದನ್ನೂ ಓದಿ: Millionaires: ಅಬ್ಬಬ್ಬಾ ವಿಶ್ವದಲ್ಲೇ ನಂ.1 ಕೋಟ್ಯಧಿಪತಿಗಳು ನಮ್ಮ ರಾಜ್ಯದಲ್ಲೇ ಇದ್ದಾರೆ ಅಂದ್ರೆ ನೀವ್ 100% ನಂಬಲೇ ಬೇಕು!

Leave A Reply

Your email address will not be published.