Prajwal Revanna Case: ಪ್ರಜ್ವಲ್ ವಿಡಿಯೋಗಳ ವೈರಲ್ ರುವಾರಿ ಡಿಕೆ ಶಿವಕುಮಾರ್ – ವಕೀಲ ದೇವರಾಜೇಗೌಡ ಆರೋಪ !!

Prajwal Revanna Case: ದೇಶಾದ್ಯಂತ ಸದ್ದು ಮಾಡುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್(D K Shivkumar) ಅವರ ಕೈವಾಡ ಇದೆ ಎಂದು ವಕೀಲ ದೇವರಾಜೇಗೌಡ(Devarajegowda) ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Tooth Brush Tips: ಬಾತ್ ರೂಂನಲ್ಲಿ ಟೂತ್ ಬ್ರಷ್ ಅನ್ನು ಇಡುತ್ತೀರ? ಮೊದಲು ಈ ಟಿಪ್ಸ್ ಫಾಲೋ ಮಾಡಿ

ಹೌದು, ದೇಶ ಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೊಡ್ಡ ಹೆಸರಿದೆ. ಹೀಗಾಗಿ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲೆಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ಅನ್ನು ಡಿ.ಕೆ. ಶಿವಕುಮಾರ್ ಹಂಚಿಕೆ ಮಾಡಿಸಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Shrinagar: ಸೈನಿಕರ ಮೇಲೆ ದಾಳಿ ಮಾಡಿದ ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ ವಾಯುಪಡೆ !

ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿ ನಡೆಸಿದ ದೇವರಾಜೇಗೌಡ ಅವರು ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ರೂವಾರಿ ಬೇರೆ ಯಾರೂ ಅಲ್ಲ, ಒನ್ ಆಂಡ್ ಓನ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್. ಸಿಎಂ, ಡಿಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನೆಲ್ಲಾ ಬಂಧಿಸಬೇಕು ಎಂಬ ಚರ್ಚೆ ನಡೆದಿದೆ. ನನ್ನ ಜೀವನದ ದೊಡ್ಡ ಹೋರಾಟ ಇದ್ದಿದ್ದೇ ಹಾಸನದ ನಾಯಕರ ವಿರುದ್ಧವಾಗಿ. ಇದೀಗ ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಅಂತ ದೇವರಾಜೇಗೌಡ ಹೇಳಿದ್ದಾರೆ.

ಅಲ್ಲದೆ ಇದರಲ್ಲಿ ‌ಮುಖ್ಯವಾಗಿ ಮೋದಿಜಿ ಟಾರ್ಗೆಟ್ ಮಾಡಲಾಗಿದೆ. ಕುಮಾರಸ್ವಾಮಿ ಅವರ ನಡುವಿನ ವೈಯಕ್ತಿಕ ವಿಚಾರದ ಎಲ್ಲಾ ದಾಖಲೆಗಳನ್ನು ‌ನನಗೆ ಕೊಟ್ಟಿದ್ದರು. ಈಗ ನನ್ನನ್ನೇ ಎ1 ಆರೋಪಿಯಾಗಿ ಟಾರ್ಗೆಟ್ ಮಾಡ್ತಾ ಇದ್ದಾರೆ. ಇದೀಗ ಇವರು ಸಂತ್ರಸ್ತರಿಗೆ ಹಣ ಕೊಟ್ಟು ಕರೆದುಕೊಂಡು ಬರ್ತಾ ಇದ್ದಾರೆ. ಯಾವ ಹೋಟೆಲ್ ‌ನಲ್ಲಿ ಎಷ್ಟು ಗಂಟೆ ಮಾತನಾಡಿದ್ದಾರೆ ಅನ್ನೋದು ಸಿಸಿಟಿವಿಯಲ್ಲಿ ಗೋತ್ತಾಗುತ್ತದೆ. ಈ ಪ್ರಕರಣ ದಿಕ್ಕುನ್ನೇ ಬದಲಾಯಿಸುತ್ತಿದ್ದಾರೆ.

ಜೊತೆಗೆ ಕಾಂಗ್ರೆಸ್(Congress) ಕಡೆಯಿಂದ ನನಗೆ ಬಿಗ್ ಆಫರ್ ಬಂದಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ಸ್ಥಾನಮಾನದ ಹುದ್ದೆಯ ಆಫರ್ ಕೊಟ್ಟಿದ್ದಾರೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕಡೆಯಿಂದ ಬಂದ ಜನ ಈ ಆಪರ್ ಕೊಟ್ಟಿದ್ದಾರೆ ಎಂದು ತಿಳಿಸಿದ ವಕೀಲ ದೇವರಾಜೇಗೌಡ, ಸುದ್ದಿಗೋಷ್ಠಿ ನಡುವೆಯೇ ಲ್ಯಾಪ್ ಟ್ಯಾಪ್‌ನಲ್ಲಿ ಡಿಕೆ ಆಫರ್ ಕೊಟ್ಟಿದ್ದಾರೆ ಎನ್ನಲಾದ ಆಡಿಯೋ ಪ್ಲೇ ಮಾಡಿ ತೋರಿಸಿದ್ದಾರೆ.

Leave A Reply

Your email address will not be published.