Belthangady: 19 ರ ಹರೆಯದ ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Belthangady: ಕಲ್ಮಂಜ ಆದರ್ಶ ನಗರದ ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದ ಘಟನೆಯೊಂದು ನಡೆದಿದೆ. ಈ ಘಟನೆ ಎ.09 ರಂದು ನಡೆದಿದೆ.

ಇದನ್ನೂ ಓದಿ: PM Modi: ಎ.14 ರಂದು ಮಂಗಳೂರಿನಲ್ಲಿ ಮೋದಿ ಹವಾ; ರೋಡ್‌ ಶೋ ಮಾಡಲು ನಿರ್ಧಾರ, ಸಮಾವೇಶ ರದ್ದು

ಆದರ್ಶ ನಗರದ ಹಮೀದ್‌, ನಝೀಮರವರ 2ನೇ ಪುತ್ರಿ ನಿಶ್ಬಾ (19) ಹೃದಯಾಘಾತದಿಂದ ತಮ್ಮ ಗಂಡನ ಮನೆಯಲ್ಲಿ ಮೃತ ಹೊಂದಿದ್ದಾರೆ. ಮೃತ ಮಹಿಳೆ ಕುಂಟಿನಿ ನಿವಾಸಿ ಖಾಲಿದ್‌ ಉಸ್ಮಾನ್‌ ಅವರ ಸೊಸೆ. ಇವರಿಗೆ ಮದುವೆಯಾಗಿ 9 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: PUC Result Helpline: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಸಂದೇಹ, ಗೊಂದಲಗಳಿಗೆ ಈ ಸಂಖ್ಯೆ ಡಯಲ್‌ ಮಾಡಿ

ಸಣ್ಣ ಪ್ರಾಯದ ಮಹಿಳೆಯರಿಗೆ ಹೃದಯಾಘಾತ ಸಂಭವಿಸುವುದು ತೀರಾ ಕಡಿಮೆ. ಮಹಿಳೆಯರು ಮೆನೋಪಾಸ್ ಆಗುವ ತನಕ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಹುತೇಕ ಮುಕ್ತರು. ಅದರಲ್ಲೂ ಗರ್ಭವತಿ ಮಹಿಳೆಯರು ಅತ್ಯಂತ ಸುರಕ್ಷಿತರು ಎಂದು ನಂಬಲಾಗಿತ್ತು. ಆದರೆ ಸಣ್ಣ ಪ್ರಾಯದ ಈ ಬಸುರಿಯ ದಿಡೀರ್ ಸಾವು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.

Leave A Reply

Your email address will not be published.