Actress Kiara Advani: ಟಾಕ್ಸಿಕ್’ನಲ್ಲಿ ಯಶ್ ಜೋಡಿಯಾಗಿ ನಟಿ ಕಿಯಾರಾ ಅಡ್ವಾನಿ ಆಯ್ಕೆಯಾಗುವ ಸಾಧ್ಯತೆ

Actress Kiara Advani: ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಯಶ್‌ ಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Kollam Temple: ಜಾತ್ರೆಯಲ್ಲಿ ತಂದೆಯ ಕೈಯಿಂದ ಬಿದ್ದ 5 ವರ್ಷದ ಮಗು; ರಥದ ಚಕ್ರದಡಿ ಸಿಲುಕಿ ದಾರುಣ ಸಾವು

ಇತ್ತೀಚಿಗಷ್ಟೇ ಈ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುತ್ತಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿತ್ತು. ಜೊತೆಗೆ ಸಾಯಿ ಪಲ್ಲವಿ, ಶ್ರುತಿ ಹಾಸನ್ ಹೆಸರೂ ಸಹ ಕೇಳಿ ಬಂದಿತ್ತು. ಆದರೆ ಇದೀಗ ಟಾಕ್ಸಿಕ್’ನಲ್ಲಿ ಕಿಯಾರಾ ಹೆಸರು ಸೇರ್ಪಡೆಯಾದಂತಾಗಿದೆ.

ಇದನ್ನೂ ಓದಿ: Court Judge Suicide: ಪತ್ನಿಯ ಜೊತೆ ಜಗಳ; ಆತ್ಮಹತ್ಯೆ ಮಾಡಿಕೊಂಡ ನ್ಯಾಯಾಧೀಶ

ನಟಿಯ ಆಯ್ಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡವು, ಟಾಕ್ಸಿಕ್ ಚಿತ್ರದಲ್ಲಿ ಮುಖ್ಯ ನಟ, ನಟಿಯರ ಆಯ್ಕೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿ ನಾವು ಮುಖ್ಯ ಪಾತ್ರಗಳ ವಿವರ ನೀಡುವುದಾಗಿ ತಿಳಿಸಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ಕೆ ನಾರಾಯಣ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಗೋವಾದ ಡ್ರಗ್ಸ್ ಮಾಫಿಯಾ ಕುರಿತ ಕಥಾಹಂದರದ ಹಿನ್ನೆಲೆಯನ್ನು ಹೊಂದಿರಲಿದೆ.

3 Comments
  1. […] ಇದನ್ನೂ ಓದಿ: Actress Kiara Advani: ಟಾಕ್ಸಿಕ್’ನಲ್ಲಿ ಯಶ್ ಜೋಡಿಯಾಗ… […]

Leave A Reply

Your email address will not be published.