Rahul Gandhi: ʼಹಿಜಾಬ್‌ʼ ಧರಿಸುವ ಕುರಿತು ರಾಹುಲ್‌ ಗಾಂಧಿ ಮಹತ್ವದ ಹೇಳಿಕೆ

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹಿಜಾಬ್‌ ಧರಿಸುವ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೋರ್ವ “ನೀವು ಪ್ರಧಾನಿಯಾದರೆ ಹಿಹಾಬ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂಬ ಪ್ರಶ್ನೆ ಕೇಳಿದರು.

ಇದನ್ನೂ ಓದಿ: RBI: ಕೆನರಾ ಬ್ಯಾಂಕ್‌, ಎಸ್‌ಬಿಐಗಳಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ

ಈ ಸಂದರ್ಭದಲ್ಲಿ ರಾಹುಲ್‌ ಅವರು “ಧರಿಸಲು ಬಯಸುವ ಮಹಿಳೆಯರ ಆಯ್ಕೆ, ಯಾರೂ ಅದನ್ನು ನಿಷೇಧಿಸಬಾರದು. ಮಹಿಳೆಯರು ತಮಗೆ ಬೇಕಾದುದನ್ನು ಧರಿಸಬಹುದು. ಅದು ಅವರ ಹಕ್ಕು. ಈ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು” ಎಂದು ಹೇಳಿದ್ದಾರೆ.

ಈ ವೀಡಿಯೋವನ್ನು ರಾಹುಲ್‌ಗಾಂಧಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.