PM Modi: ಲೋಕಸಭೆ ಚುನಾವಣೆಯಲ್ಲಿ BJP ಹಾಗೂ NDA ಕೂಟ ಗೆಲ್ಲೋ ಸ್ಥಾನಗಳೆಷ್ಟು ಗೊತ್ತಾ?! ಮೋದಿ ನುಡಿದ ಭವಿಷ್ಯ ಕೇಳಿ ವಿಪಕ್ಷಗಳೇ ಶಾಕ್

PM Modi: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಜಯಭೇರಿ ಭಾರಿಸಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಅಲ್ಲದೆ ಇದು ದೇಶದ ಹೆಚ್ಚಿನ ಜನರಿಗೆ ಗೊತ್ತಿರುವ ಸಂಗತಿಯೂ ಹೌದು. ಆದರೀಗ ಅಚ್ಚರಿ ಎಂಬಂತೆ ಪ್ರಧಾನಿ ಮೋದಿಯವರು(PM Modi) ಕೂಡ ಮುಂಬರುವ ಲೋಕಸಭಾ ಚುನಾವಣೆಯ ಗೆಲುವಿನ ಕುರಿತು ಭವಿಷ್ಯ ನುಡಿದಿದ್ದಾರೆ.

ಹೌದು, ತಮ್ಮ ಎರಡನೇ ಅವಧಿಯ ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election)ಎನ್‌ಡಿಎ(NDA) 400 ಸ್ಥಾನಗಳ ಗಡಿ ದಾಟಲಿದೆ. ಬಿಜೆಪಿಗೆ 370 ಸೀಟು ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ತಮ್ಮ ಅಧಿವೇಶನದ ಮಾತಿನ ವೇಳೆ ಮಾತನಾಡಿದ ಅವರು ಬಿಜೆಪಿ ಎರಡನೇ ಅವಧಿ ಸರ್ಕಾರದಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನ್ನು ರದ್ದಪಡಿಸಲಾಯಿತು. ಇದೀಗ ಇಡೀ ದೇಶವೇ ಹೇಳುತ್ತಿದೆ ಅಬ್ ಕಿ ಬಾರ್ ಮೋದಿ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳಿದ್ದಾರೆ. ನಮ್ಮ ಸರ್ಕಾರದ ಮೂರನೇ ಅವಧಿ ಈಗ ಬಹಳ ದೂರವಿಲ್ಲ. ಇನ್ನು ಕೇವಲ 100-125 ದಿನಗಳು ಉಳಿದಿವೆ. ನಾನು ಅಂಕಿಅಂಶಗಳಿಗೆ ಹೋಗುವುದಿಲ್ಲ. ಆದರೆ ನಾನು ದೇಶದ ಮನಸ್ಥಿತಿಯನ್ನು ನೋಡುತ್ತೇನೆ. ಇದು ಎನ್‌ಡಿಎಯನ್ನು 400 ದಾಟುವಂತೆ ಮಾಡುತ್ತದೆ. ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ ಎಂದು ಪ್ರಧಾನಿಯವರು ವಿಪಕ್ಷಗಳು ಕೂಡ ಶಾಕ್ ಆಗುವಂತೆ ಭವಿಷ್ಯ ಹೇಳಿದ್ದಾರೆ.

ಇಷ್ಟೇ ಅಲ್ಲದೆ ವಿಪಕ್ಷಗಳಿಗೆ ಟಾಂಗ್ ನೀಡುತ್ತಲೇ ಬಿಜೆಪಿ 2 ಅವಧಿಯ ಸರ್ಕಾರದ ಸಾಧನೆ ಹಾಗೂ 3ನೇ ಅವಧಿಯಲ್ಲಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ನಮ್ಮ ಮೊದಲ ಅವಧಿಯಲ್ಲಿ ಯುಪಿಎ ಸರ್ಕಾರ ಮಾಡಿದ ತಪ್ಪು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತು. 2ನೇ ಅವಧಿಯಲ್ಲಿ ನಾವು ಹೊಸ ಯೋಜನೆ ಮೂಲಕ ಭವ್ಯ ಭಾರತದ ಭವಿಷ್ಯ ರೂಪಿಸಿದ್ದೇವೆ. ಇದೀಗ 3ನೇ ಅವಧಿಯಲ್ಲಿ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿಯವರು ದೇಶದ ಜನತೆಗೆ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು.

1 Comment
  1. watch porn says
Leave A Reply

Your email address will not be published.