ಇತ್ತೀಚೆಗೆ ಕೆಲವೊಂದು ಜೋಡಿಗಳು ಚಲಿಸುವ ಗಾಡಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸುವ ಪರಿಪಾಠ ಹೆಚ್ಚಾಗಿದೆ. ಇದರ ಕುರಿತು ಪೊಲೀಸರು ಕ್ರಮ ತೆಗೆದುಕೊಂಡರೂ ಜೋಡಿಗಳ ಈ ತೋರ್ಪಡಿಕೆಯ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಅಂತಹುದೇ ಒಂದು ಘಟನೆ ಇದೀಗ ನಡೆದಿದೆ. ಚಲಿಸುವ ಸ್ಕೂಟರ್ನಲ್ಲಿ ಚುಂಬಿಸುವ ಮೂಲಕ ಜೋಡಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Sponsoredಈ ಘಟನೆ ನಡೆದಿರುವುದು ಮುಂಬೈನಲ್ಲಿ. ಯುವಕನೋರ್ವ ಚಲಿಸುವ ಗಾಡಿಯಲ್ಲಿ ತನ್ನ ತೊಡೆ ಮೇಲೆ ಯುವತಿಯೋರ್ವಳನ್ನು ಕೂರಿಸಿ, ಮೈಮೇಲೆ ಕಂಬಳಿ ಹೊದ್ದುಕೊಂಡು ಚುಂಬಿಸಿರುವ ವೀಡಿಯೋ ವೈರಲ್ ಆಗಿದೆ. ಈ ಜೋಡಿ ಹೆಲ್ಮೆಟ್ ಧರಿಸದೆ ನಿರ್ಭೀತಿಯಿಂದ ನಡು ರಸ್ತೆಯಲ್ಲಿ ಈ ಕೆಲಸ ಮಾಡಿದ್ದಾರೆ.





Comments are closed.