Bigg Boss 10: ಮೈಕಲ್​ ಮತ್ತೆ ವಾಪಾಸ್​ ಬಂದ್ರಾ? ಡಬಲ್​ ಎಲಿಮಿನೇಶನ್ ಆಗಿಲ್ವಾ ಹಾಗಾದ್ರೆ?

ಬಿಗ್​ ಬಾಸ್​ 10 ರಲ್ಲಿ ಕಾಂಪಿಟೇಷನ್​ ದಿನೇ ದಿನೇ ಹೆಚ್ಚುತ್ತಲೇ ಇದೆ. ಇವುಗಳ ನಡುವೆ ನಿನ್ನೆ ಡಬಲ್​ ಎಲಿಮಿನೇಷನ್​ ಕೂಡ ಆಗಿದೆ. ಟಾಪ್​ 3 ನಲ್ಲಿ ಸಿರಿ, ಅವಿನಾಶ್​, ಮೈಕಲ್​ ಬಂದಿದ್ದರು. ಫೈನಲ್​ನಲ್ಲಿ ಅವಿನಾಶ್​ ಮತ್ತು ಮೈಕಲ್​ ಇಬ್ಬರೂ ಮನೆಯಿಂದ ಹೊರಗೆ ಹೋಗಿರುವುದನ್ನು ತೋರಿಸಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಇಲ್ಲಿದೆ ನೋಡಿ ಬಿಗ್​ ಅಪ್ಡೇಟ್​.

ಅವಿನಾಶ್ ಹಾಗೂ ಮೈಕಲ್​ನ​ ಗಾರ್ಡನ್ ಏರಿಯಾಗೆ ಬಂದ ಕಾರಿನಲ್ಲಿ ಕೂರಿಸಲಾಯಿತು. ಆ ಬಳಿಕ ಎರಡೂ ಕಾರುಗಳು ಹೊರ ಹೋದವು. ಇಲ್ಲಿಗೆ ಎಪಿಸೋಡ್ ಪೂರ್ಣಗೊಂಡಿದೆ. ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ಇನ್ನು, ಲೈವ್​ನಲ್ಲಿ ಸಿರಿ ಆಡಿದ ಮಾತು ಗಮನ ಸೆಳೆದಿದೆ. ಪಾತ್ರೆ ತೊಳೆಯೋದು ಯಾರು ಎನ್ನುವ ವಿಚಾರವನ್ನು ಅವರು ಮಾತನಾಡುತ್ತಿದ್ದರು. ಈ ವೇಳೆ ಸಿರಿ ಅವರು ಮೈಕಲ್ ಹೆಸರನ್ನು ಸೇರಿಸಿದ್ದರು. ಇದು ಕೂಡ ಮೈಕಲ್ ದೊಡ್ಮನೆಗೆ ಮರಳಿದ್ದಾರೆ ಎನ್ನುವುದಕ್ಕೆ ಸಿಕ್ಕಿರೋ ಸಾಕ್ಷಿ. ಇಂದು (ಡಿಸೆಂಬರ್ 25) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ.

ಇದನ್ನು ಓದಿ: Crime News: 70 ವರ್ಷದ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದ ಮಗ; ಕಾರಣವೇನು ಗೊತ್ತೇ?

Leave A Reply

Your email address will not be published.