‘CID’ ಇನ್ಸ್‌ಪೆಕ್ಟರ್ ದಿನೇಶ್ ಫಡ್ನಿಸ್ ನಿಧನ !!

Entertainment Bollywood news Cid fame actor Dinesh phadnis passes away

Dinesh Phadnis: ಭಾರತದ ದೀರ್ಘಾವಧಿಯ ದೂರದರ್ಶನ ಹಿಂದಿ ಧಾರಾವಾಹಿ ಸರಣಿಗಳಲ್ಲಿ ಒಂದಾದ ‘ಸಿಐಡಿ’ ಯಲ್ಲಿ ಇನ್ಸ್‌ಪೆಕ್ಟರ್ ಫ್ರೆಡೆರಿಕ್ಸ್ ಪಾತ್ರದಲ್ಲಿ ನಟಿಸಿದ್ದ 57 ವರ್ಷದ ನಟ ದಿನೇಶ್ ಫಡ್ನಿಸ್ (Dinesh Phadnis) ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನೇಶ್ ಅವರ ನಿಧನ ಸುದ್ದಿಯನ್ನು ಅವರ ಆಪ್ತ ಸ್ನೇಹಿತ ಮತ್ತು ಸಿಐಡಿ ಕಾರ್ಯಕ್ರಮದ ಸಹನಟ ದಯಾನಂದ ಶೆಟ್ಟಿ ಖಚಿತಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಹೃದಯಾಘಾತದಿಂದ ಬಳಲುತ್ತಿದ್ದ ದಿನೇಶ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು (ಡಿ. 5) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸದ್ಯ ದಿನೇಶ್ ಫಡ್ನಿಸ್ ಅವರ ಅಂತ್ಯಕ್ರಿಯೆ ದೌಲತ್ ನಗರದ ಚಿತಾಗಾರದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನು ಓದಿ: Rice: ಅನ್ನ ಉದುರು ಉದುರಾಗಿ ಬರಲು ಹೀಗೆ ಮಾಡಿ – ಊಟ ಮಾಡಿದವರು ಪಕ್ಕಾ ನಿಮ್ಮನ್ನು ಹೊಗಳದೇ ಹೋಗಲಾರರು

ದಿನೇಶ್ ಫಡ್ನಿಸ್ ಅವರು ‘ಸಿಐಡಿ’ಯಲ್ಲಿ ಫ್ರೆಡೆರಿಕ್ಸ್ ಪಾತ್ರದಲ್ಲಿ ನಟಿಸಿದ್ದರು ಈ ಪಾತ್ರಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಗಳಿಸಿದ್ದು, ಸಿಐಡಿ ಧಾರಾವಾಹಿಗಾಗಿ ಅವರು ಸುಮಾರು ಎರಡು ದಶಕಗಳನ್ನು ಮೀಸಲಿಟ್ಟಿದ್ದರು. ‘ಸಿಐಡಿ’ಯಲ್ಲಿನ ಅವರ ಪಾತ್ರದ ಜೊತೆಗೆ, ದಿನೇಶ್ ಫಡ್ನಿಸ್ ಜನಪ್ರಿಯ ಟಿವಿ ಶೋ ‘ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ’ ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಭ್ರೂಣಲಿಂಗ ಹತ್ಯೆ ಪ್ರಕರಣ- ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಸರ್ಕಾರ

1 Comment
Leave A Reply

Your email address will not be published.