Mansoor Ali Khan:ತ್ರಿಷಾ ಜೊತೆ ಕ್ಷಮೆ ಕೇಳೋ ವಿಚಾರ – ಈ ನಟಿಯರ ಜೊತೆ ಬೆಡ್ ರೂಂ, ರೇಪ್ ಸೀನ್ ಎಲ್ಲಾ ಮಾಡಿರುವೆ ಇವಳ್ಯಾವ ಲೆಕ್ಕಾ ಎಂದ ಖಳ ನಾಯಕ!!

Tollywood news Mansoor Ali Khan reacts after Leo co star trisha lashesh out over his rape comment

Mansoor Ali Khan: ತ್ರಿಶಾ(Trisha Krishnan) ಮತ್ತು ಮನ್ಸೂರ್ (Mansoor Ali Khan)ಅವರು ಲೋಕೇಶ್ ಕನಕರಾಜ್ ಅವರ ಇತ್ತೀಚಿನ ಹಿಟ್ ಸಿನಿಮಾ ಲಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿಶಾ ಹೀರೋಯಿನ್ ಆಗಿ ನಟಿಸಿದ್ದು, ಮನ್ಸೂರ್ ಆಲಿ ಖಾನ್(Mansoor Ali Khan) ವಿಲನ್ ಆಗಿ ನಟಿಸಿದ್ದಾರೆ. ತಮಿಳು ಚಿತ್ರ ‘ಲಿಯೋ’ಕ್ಕೆ ಸಂಬಂಧಿಸಿದಂತೆ ಖ್ಯಾತ ಖಳನಾಯಕ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಷಾ ಕೃಷ್ಣನ್ ಅವರ ಬಗ್ಗೆ ಅಸಹ್ಯಕರ ಹೇಳಿಕೆ ನೀಡಿದ್ದು, ಸದ್ಯ ಇವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮನ್ಸೂರ್ ಆಲಿ ಖಾನ್‌, ‘ನಾನು ತ್ರಿಶಾ ಜೊತೆ ಅವರೊಂದಿಗೆ ನಟಿಸುತ್ತೇನೆ ಎಂದು ತಿಳಿದಾಗ ಆ ಸಿನಿಮಾದಲ್ಲಿ ಬೆಡ್‌ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ ಎಂದುಕೊಂಡಿದ್ದೆ. ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಕೂಡ ಅಂದುಕೊಂಡಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್‌ ರೂಮ್‌ ಒಳಗೆ ಹೋಗುವ ದೃಶ್ಯವಿತ್ತು. ನಾನು ಬೇಕಾದಷ್ಟು ರೇಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಆ ರೀತಿಯ ದೃಶ್ಯವಿರಲಿಲ್ಲ. ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ತ್ರಿಷಾ ಅವರನ್ನು ತೋರಿಸಲಿಲ್ಲ’ ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿಕೊಂಡಿದ್ದರು. ಈ ಹೇಳಿಕೆಯ ಕುರಿತಂತೆ ನಟಿ ತ್ರಿಶಾ, ಲಿಯೋ ನಿರ್ದೇಶಕ ಲೋಕೇಶ್ ಕನಗರಾಜ್ ಖಂಡಿಸಿದ್ದಾರೆ.

ಮನ್ಸೂರ್‌ ಆಲಿ ಖಾನ್‌ರವರನ್ನು ತ್ರಿಷಾ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆತನ ಜೊತೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಖಂಡಾತುಂಡವಾಗಿ ತ್ರಿಷಾ ಹೇಳಿದ್ದಾರೆ. ಈ ನಡುವೆ,ಮನ್ಸೂರ್‌ ಆಲಿ ಖಾನ್ ಅವರು ಕ್ಷಮೆ ಕೇಳುವವರೆಗೂ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನ್ಸೂರ್ ಖಾನ್, ಈ ರೀತಿ ನನಗೆ ನಿಷೇಧ ಹೇರಿರುವುದು ಸರಿಯಲ್ಲ. ಈ ರೀತಿಯ ಸಮಸ್ಯೆ ಉಂಟಾದಾಗ ನನ್ನ ವಿವರಣೆಯನ್ನೂ ಕೇಳಲಿಲ್ಲ. ಅವರು ನನ್ನನ್ನು ಕರೆದು ವಿವರಣೆ ಕೇಳಿ ನೋಟಿಸ್ ನೀಡಿ ವಿಚಾರಣೆ ಮಾಡಬೇಕಾಗಿತ್ತು. ಆದರೆ ಈ ರೀತಿ, ಏಕಾಏಕಿ ನಿಷೇಧ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಹೇಳಿರುವ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಖಾನ್ ಹೇಳಿದ್ದು, ತ್ರಿಶಾ ಅವರಿಗೆ ಎಡಿಟ್ ಮಾಡಿರುವ ವಿಡಿಯೋವನ್ನೂ ನೀಡಿದ್ದಾರೆ. ನಾನು ಸಹಜವಾಗಿ ಹಗುರವಾದ ಧಾಟಿಯಲ್ಲಿ ಹೇಳಿದ್ದೆ ಆದರೆ ವಿವಾದ ಆಗುವ ಹಾಗೆ ವಿಡಿಯೋ ಟ್ರಿಮ್ ಮಾಡಿ ವೈರಲ್ ಮಾಡಲಾಗುತ್ತಿದೆ ಎಂದು ಖಾನ್ ಹೇಳಿದ್ದಾರೆ.ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷವನ್ನು ಬೆಂಬಲಿಸಿ ನಾನು ಸ್ಪರ್ಧಿಸಲಿದ್ದೇನೆ ಎನ್ನುವ ಕಾರಣ ಈ ರೀತಿ ಮಾಡಲಾಗಿದೆ ಎಂದು ಕೂಡ ಖಾನ್ ಹೇಳಿದ್ದಾರೆ. ನಾನು ಹಳೆ ಕಾಲದ ರೀತಿಯಲ್ಲಿ ಈಗಿನ ಕಾಲದಲ್ಲಿ ನಾಯಕಿಯರ ಜೊತೆ ನಟಿಸುವ ಅವಕಾಶ ಸಿಗುತ್ತಿಲ್ಲ ಎಂದು ನನ್ನ ಹತಾಶೆಯನ್ನು ಹೊರಹಾಕಿದಷ್ಟೇ!!ಆದರೆ ಆ ವಿಡಿಯೋ ಎಡಿಟ್ ಮಾಡಲಾಗಿದ್ದು, ಇದಕ್ಕೆ ಹೆದರುವ ವ್ಯಕ್ತಿ ನಾನಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ, ಏನೇ ಆದರೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅದೆಷ್ಟು ನಟಿಯರ ಜೊತೆ ರೇಪ್ ಸೀನ್ ಮಾಡಿದ್ದೇನೆ. ನನ್ನನ್ನು ನೋಡಿದರೆ ಕ್ಷಮೆ ಕೇಳುವವನ ಹಾಗೆ ಕಾಣುತ್ತೇನಾ ?? ನಾನು ತಪ್ಪೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Tumakur Murder: ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ – ಭಯ ಬೀಳಿಸುತ್ತೆ ಕಾರಣ !!

1 Comment
  1. […] ಇದನ್ನೂ ಓದಿ: Mansoor Ali Khan:ತ್ರಿಷಾ ಜೊತೆ ಕ್ಷಮೆ ಯಾಕೆ ಕೇಳೋ ವಿಚ… […]

Leave A Reply

Your email address will not be published.