Post Office Jobs: ನೀವು 10th ಪಾಸಾಗಿದ್ದೀರಾ? ಅಂಚೆ ಇಲಾಖೆಯಲ್ಲಿ ನಿಮಗಿದೆ ಬಂಪರ್‌ ಉದ್ಯೋಗಾವಕಾಶ, ಮಾಸಿಕ ರೂ.63,000 ಸಂಬಳ!!

Govt job news India post office recruitment 2023 apply for 6 posts

Post Office Jobs: ಉದ್ಯೋಗಾಂಕ್ಷಿಗಳೇ ಗಮನಿಸಿ, ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು(Post Office Jobs) ಹುಡುಕುತ್ತಿದ್ದರೆ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಭಾರತೀಯ ಅಂಚೆ ಇಲಾಖೆ(India Postal Department)ಸ್ಟಾಫ್ ಕಾರ್ ಡ್ರೈವರ್(Staff Car Driver) ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4, 2023 ಆರಂಭಿಕ ದಿನವಾಗಿದ್ದು, ನವೆಂಬರ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು.ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳ ಜೊತೆಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ ಹೀಗಿದೆ:
O/o ಸೀನಿಯರ್ ಮ್ಯಾನೇಜರ್ಮೇಲ್ ಮೋಟಾರ್ ಸೇವೆ,
C-121ನರೈನಾ ಇಂಡಸ್ಟ್ರಿಯಲ್ ಏರಿಯಾ ಹಂತ-I,
ನರೈನಾ, ನವದೆಹಲಿ-110028

ಅರ್ಹತಾ ಮಾನದಂಡಗಳು ಹೀಗಿವೆ:
* ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

* ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು.

* ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯಿರಲಿದೆ.
* ಅರ್ಹ ಅಭ್ಯರ್ಥಿಗಳನ್ನು ಡ್ರೈವಿಂಗ್ ಲೈಸೆನ್ಸ್, ಡ್ರೈವಿಂಗ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
* ಆಯ್ಕೆಯಾದ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
* ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ನೀಡಲಾಗುತ್ತದೆ.

ಇದನ್ನೂ ಓದಿ: Psycho Lover:ಪ್ರಿಯತಮೆ ಪಾಲಿಗೆ ವಿಕೃತ ಕಾಮಿಯಾದ ಪ್ರಿಯತಮ – ತನ್ನವಳ ನಗ್ನ ಫೋಟೋವನ್ನೇ ಎಲ್ಲರಿಗೂ ಹಂಚಿದ

Leave A Reply

Your email address will not be published.