Vodafone Idea: ಈ ನೆಟ್ವರ್ಕ್ ಪರಿಚಯಿಸಿದೆ ಭಾರೀ ಅಗ್ಗದ ರೀಚಾರ್ಜ್ ಪ್ಲಾನ್ ! ಇಲ್ಲಿ ನಿಮಗೆ ಎಲ್ಲವೂ ಅನ್ಲಿಮಿಟೆಡ್

Vodafone-Idea Network Introduces Recharge Plan at Low Price

Vodafone Idea: ಜನಪ್ರಿಯತೆ ಪಡೆಯಲು ವೊಡಾಫೋನ್ ಹರಸಾಹಸ ಪಡುತ್ತಿದೆ. ಅದಲ್ಲದೆ ಬಜೆಟ್ ಪ್ರಿಯರಿಗೆಂದೇ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಯೋಜನೆಗಳನ್ನು ಕೂಡ ನೀಡಿದೆ. ಹೌದು ವೊಡಾಫೋನ್ (Vodafone-idea Plan)- ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ನೀವೂ ಕೂಡ ಇದರ ಗ್ರಾಹಕರಾಗಿದ್ದರೆ ನಿಮಗಾಗಿ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ.

ಹೌದು, ಈ ಅಗ್ಗದ ಯೋಜನೆಯು Vi Hero ಅನ್‌ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್‌ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.

ವೊಡಾಫೋನ್ ಐಡಿಯಾ ರೂ 299 ಪ್ರಿಪೇಯ್ಡ್ ಪ್ಲಾನ್ :
Vodafone Idea (Vi) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ 299 ರೂಪಾಯಿಯ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS, ಮತ್ತು 1.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದಲ್ಲದೆ, ಇದರಲ್ಲಿ 5GB ಬೋನಸ್ ಡೇಟಾವನ್ನು ಕೂಡ ನೀಡಲಾಗುತ್ತದೆ. ಈ ಯೋಜನೆಯು Vi Hero ಅನ್‌ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್‌ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.

Vodafone Idea (Vi) ನಿಂದ 299 ರೂ. ಪ್ರಿಪೇಯ್ಡ್ ಯೋಜನೆಯು ಎಲ್ಲಾ ಅಗತ್ಯ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಯೋಜನೆಯನ್ನು ಹುಡುಕುತ್ತಿರುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಯೋಜನೆಯ ಮಾನ್ಯತೆಯು ಕೇವಲ 28 ದಿನಗಳು. ಆದರೆ, ಬಳಕೆದಾರರು ಇದರೊಂದಿಗೆ ಒಟ್ಟು 42GB + 5GB ಬೋನಸ್ ಡೇಟಾವನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಯೋಜನೆಯು Vi Movies ಮತ್ತು TV ​​ಕ್ಲಾಸಿಕ್‌ನ OTT ಪ್ರಯೋಜನವನ್ನು ಸಹ ಹೊಂದಿದೆ. Vi app ಮೂಲಕ ಬಳಕೆದಾರರು iOS ಮತ್ತು Android ಸಾಧನಗಳಲ್ಲಿ OTT ಕಂಟೆಂಟ್ ವೀಕ್ಷಿಸಬಹುದು.

ಈ ಯೋಜನೆಯೊಂದಿಗೆ, ಬಳಕೆದಾರರು ತಮ್ಮ FUP (fair usage policy) ಡೇಟಾವನ್ನು ಯಾವುದೇ ಎಫಕ್ಟ್ ಇಲ್ಲದೇ ಬಳಸಬಹುದು. ಪ್ರತಿದಿನ ರಾತ್ರಿ 12 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ Binge All Night ಆಫರ್‌ನೊಂದಿಗೆ ಅನಿಯಮಿತ ಡೇಟಾವನ್ನು ಆನಂದಿಸಬಹುದು. ಅದರಲ್ಲೂ ರಾತ್ರಿ ವೇಳೆ ಮೊಬೈಲ್ ಡೇಟಾ ಹೆಚ್ಚು ಬಳಸುವವರಿಗೆ ಇದು ಉತ್ತಮ ಆಫರ್. ಮೊದಲ 3 ದಿನಗಳವರೆಗೆ 5GB ಡೇಟಾ ಲಭ್ಯವಿರುತ್ತದೆ.

 

ಇದನ್ನೂ ಓದಿ: Tourists Rescued: ಗೋಕರ್ಣ ಕಡಲಲ್ಲಿ ಒಂದೇ ಕುಟುಂಬದ ಏಳು ಮಂದಿ ಮುಳುಗಡೆ! ಮುಂದೇನಾಯ್ತು?

Leave A Reply

Your email address will not be published.