Tourists Rescued: ಗೋಕರ್ಣ ಕಡಲಲ್ಲಿ ಒಂದೇ ಕುಟುಂಬದ ಏಳು ಮಂದಿ ಮುಳುಗಡೆ! ಮುಂದೇನಾಯ್ತು?
uttara kannada news seven tourists rescued by life guards in gokarna beach latest news

Gokarna Coast: ಕರಾವಳಿ ಅಂದರೆ ಕಡಲು. ಈ ಕಡಲಿನ ತೀರದಲ್ಲಿ ಪ್ರವಾಸಿಗರು ಸಮಯ ಕಳೆಯಲೆಂದು ಈಜಾಡುವುದು ಸಾಮಾನ್ಯ. ಆದರೆ ಗೋಕರ್ಣ ಕಡಲ ತೀರದಲ್ಲಿ ಒಂದೇ ಕುಟುಂಬದ ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋಗುವ ಸಂದರ್ಭದಲ್ಲಿ ಅಪಾಯದ ಮುನ್ಸೂಚನೆ ಅರಿತ ಗೋಕರ್ಣ ಕಡಲ ತೀರದ ಜೀವ ರಕ್ಷಕ ಪಡೆಯ ಯುವಕರು ಏಳು ಮಂದಿಯ ಪ್ರಾಣವನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆಯೊಂದು ನಡೆದಿದೆ.
ಹುಬ್ಬಳ್ಳಿಯಿಂದ ಬಂದ ಕುಟುಂಬವೇ ಈ ಘಟನೆಯಿಂದ ಪಾರಾಗಿದ್ದು. ಸಮುದ್ರ ಕಂಡೊಡನೆ ಈಜಾಡಲೆಂದು ನೀರಿಗೆ ಇಳಿದ ಈ ಏಳು ಮಂದಿ ಕೊನಗೆ ಮುಳುಗಲು ಪ್ರಾರಂಭಿಸಿದರು. ಕೊನೆಗೆ ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಲಾಯಿತು. ಆದರೆ ಎಲ್ಲರೂ ಮುಳುಗಲು ಸಂಭವಿಸಿದ್ದರಿಂದ ಲೈಫ್ ಗಾರ್ಡ್‌ಗಳು ಎಲ್ಲಾ ಏಳು ಮಂದಿಯನ್ನು ನೀರಿನಿಂದ ಮೇಲಕ್ಕೆತ್ತಿದರು.
ಪರಶುರಾಮ(44), ರುಕ್ಮಿಣಿ (38), ಧೀರಜ್ (14), ಅಕ್ಷರ(14), ಖುಷಿ (13), ದೀಪಿಕಾ (12), ನಂದಕಿಶೋರ (10) ಇವರೇ ರಕ್ಷಿಸಲ್ಪಟ್ಟ ಪ್ರವಾಸಿಗರು. ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಾಂತ ಅವರು ರಕ್ಷಣೆ ಮಾಡಿದರು. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಜೀವ ಉಳಿಸಿದಕ್ಕೆ ಪ್ರವಾಸಿಗರು ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: Swiss Bank: ಏಕಾಏಕಿ ಸ್ವಿಸ್ ಬ್ಯಾಂಕಿಂದ ಹಲವು ಮಾಹಿತಿ ಪಡೆದ ಭಾರತ, ಸ್ಪೋಟಕ ಮಾಹಿತಿ ಬಹಿರಂಗ