Someshwar: ಮಂಗಳೂರು (ಉಳ್ಳಾಲ): ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು!

Karnataka news ullala news Big pili torake fish found in Someshwar

Someshwar: ಸೋಮೇಶ್ವರ( Someshwar)ಉಚ್ಚಿಲ ಮೀನುಗಾರರ ಬಲೆಗೆ ಇಂದು ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದ್ದು, ಈ ಮೀನು ಭರ್ಜರಿ 75 ಕೆಜಿ ತೂಕ ಎಂದು ಹೇಳಲಾಗಿದೆ. ಮೀನುಗಾರರದ ಶೈಲೇಶ್‌ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಜ್‌, ಕಲ್ಪೇಶ್‌ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವವರು ಹಾಕಿದ್ದ ಬಲೆಗೆ ಈ ಬೃಹತ್‌ ತೂಕದ ಮೀನು ಬಿದ್ದಿದೆ.

ಪ್ರತಿವರ್ಷದಂತೆ ಮೀನುಗಾರರಿಗೆ ಹಲವು ವಿಧದ ಮೀನು ದೊರಕುತ್ತದೆ. ಆದರೆ ಇದು ಈ ಬಾರಿಯ ಅಂದರೆ ಈ ವರ್ಷದ ಮೀನುಗಾರಿಕೆಯಲ್ಲಿ ದೊರಕಿದ ಅತಿ ದೊಡ್ಡ ಮೀನು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಈ ಬಾರಿ ಇಷ್ಟು ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಉತ್ಸಾಹ ಮೂಡಿದೆ. ವ್ಯಾಪಾರ ಮಾಡುವುದಿದ್ದರೆ ಈ ಮೀನಿಗೆ ಸುಮಾರು ಕೆಜಿಗೆ 200ರೂ. ದೊರಕುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೇ ಈದ್‌ ಮಿಲಾದ ಹಬ್ಬ ಇರುವುದರಿಂದ ಇದನ್ನು ತಮ್ಮೊಳಗೆ ಮೀನುಗಾರರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು ಸಿಟಿ ಬಸ್‌ಗಳ ಆಟಾಟೋಪಕ್ಕೆ ಕಮೀಷನರ್ ಮೂಗುದಾರ !

Leave A Reply

Your email address will not be published.