Kidnap News: ಕೊಡಗಿನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ: ಹಿಂದೂ ಹುಡುಗಿಯರ ಕಿಡ್ನಾಪ್: ನಾಲ್ವರು ಮುಸ್ಲಿಂ ಯುವಕರ ಬಂಧನ!

Kodagu crime news four Muslim youth arrested for kidnapping minor Hindu girl

Kodagu: ಕೊಡಗಿನಲ್ಲಿ(Kodagu)ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು,ಅಪ್ರಾಪ್ತ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರ ತಂಡ ಕಿಡ್ನಾಪ್ ಮಾಡಿದ ಆರೋಪ ಕೇಳಿಬಂದಿದೆ.

ಅಪ್ರಾಪ್ತ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರ ತಂಡವೊಂದು ಕಿಡ್ನಾಪ್ ಮಾಡಿದ ಆರೋಪ ಕೇಳಿಬಂದಿದ್ದು, ಈ ಕುರಿತು ನಾಲ್ವರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದ್ದು, ಈ ಆರೋಪಿಗಳು ಪೈಯಿಂಟಿಂಗ್ ಮತ್ತಿತ್ತರೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪಿಯುಸಿ ಓದುತ್ತಿದ್ದ ಹದಿಹರೆಯದ ಹಿಂದೂ ಯುವತಿಯರನ್ನು ಕೊಡಗಿನಿಂದ ಮೈಸೂರಿಗೆ ಯುವಕರು ಅಪಹರಿಸಿ ಒಯ್ಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ವಿಚಾರ ತಿಳಿದು ಫೋನ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಚೇಸಿಂಗ್ ಮಾಡಲು ಮುಂದಾಗಿದ್ದು, ಈ ವೇಳೆ, ಆರೋಪಿಗಳು ಕುಶಾಲನಗರದಲ್ಲಿ ಬಾಲಕಿಯರನ್ನು ಇಳಿಸಿ ಮೈಸೂರಿಗೆ ಪರಾರಿಯಾಗಲು ಮುಂದಾಗಿದ್ದಾರೆ. ಆ ಬಳಿಕ ಮೈಸೂರಿನ ಮಂಡಿ ಮೊಹಲ್ಲಾದಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ನಾಲ್ವರು ಆರೋಪಿಗಳ ಆರೋಗ್ಯ ತಪಾಸಣೆಗೆ ಪೊಲೀಸರು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Sanya Iyer: ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿದ ಸಾನಿಯಾ – ವೈರಲ್ ಆದ ಫೋಟೋ ಕಂಡು ನೆಟ್ಟಿಗರು ಶಾಕ್ !

Leave A Reply

Your email address will not be published.