Free sanitary pad scheme: ಪದವಿಪೂರ್ವ ಶಿಕ್ಷಣದ ವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆಯಾಗಿರುವ ಶುಚಿ ಯೋಜನೆ 2013- 2014ರಲ್ಲಿ ಪ್ರಾರಂಭಗೊಂಡಿದ್ದು, ಆದರೆ ಕೊರೋನಾ(Covid )ಮಹಾಮಾರಿ ಹಿನ್ನೆಲೆ ಯೋಜನೆ ಸ್ಥಗಿತವಾಗಿತ್ತು. ಇದೀಗ ಮತ್ತೆ ಕರ್ನಾಟಕದಲ್ಲಿ (Government)ಶುಚಿ ಯೋಜನೆಗೆ ಮತ್ತೆ ಚಾಲನೆ ಲಭ್ಯವಾಗಿದೆ.
Sponsoredಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆಗೆ ಹೆಚ್ಚು ಪ್ರಯೋಜನ ಮಾಡಲಾಗಿದೆ. ವಿದ್ಯಾರ್ಥಿಗಳ(Students)ಆರೋಗ್ಯ ದೃಷ್ಟಿಯಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ಕರ್ನಾಟಕದ ಅನುದಾನಿತ ಹಾಗೂ ಸರ್ಕಾರಿ ಶಾಲೆಯ(School) ವಿದ್ಯಾರ್ಥಿನಿಯರಿಗೆ (Students) ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಶುಚಿ ಯೋಜನೆಯ(Shuchi free sanitary pad scheme ) ಅತೀ ಶೀಘ್ರದಲ್ಲಿಯೆ ಮತ್ತೆ ಶುರುವಾಗಲಿದ್ದು, ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao)ಅವರು ಮಾಹಿತಿ ನೀಡಿದ್ದಾರೆ.
Marriage AdSponsoredಈ ಯೋಜನೆ ಮರು ಆರಂಭವಾಗುತ್ತಿರುವ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಶುಚಿ ಯೋಜನೆ ಆರಂಭಗೊಳ್ಳಲು ಬೇಕಾದ ತಯಾರಿ ನಡೆಯುತ್ತಿದ್ದು, ಸೆಪ್ಟೆಂಬರ್ ನಿಂದ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಕೊರೋನಾದ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮತ್ತೆ ಜೀವ ಸಿಕ್ಕಂತಾಗಿದೆ.ಅಂದ ಹಾಗೆ ಈ ಯೋಜನೆಯ ಮೂಲಕ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಮಾಡುವ ಮುಖಾಂತರ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದೊಂದಿಗೆ ಈ ಯೋಜನೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ: Intresting Fact:ಒಂದೇ ಒಂದು ದಿನ ಶಾಲೆಗೆ ಚಕ್ಕರ್ ಹಾಕದೆ 50 ದೇಶ ಸುತ್ತಿದ್ಲು 10 ರ ಈ ಪೋರಿ !ಹೆಂಗ್ ಸ್ವಾಮಿ ಸಾಧ್ಯ ?!




